Kannada NewsKarnataka News

*ರೈತನಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆಬಿದ್ದ ರೆಕಾರ್ಡ್ ಕಿಪರ್*

ಪ್ರಗತಿವಾಹಿನಿ ಸುದ್ದಿ: ರೈತನಿಂದ ಎಂಟು ಸಾವಿರ ಹಣಕ್ಕೆ ಬೇಡಿಕೆ ಇಟ್ಟು, ಲಂಚ ಸ್ವಿಕರಿಸುವಾಗ ಎಡಿಎಲ್ಆರ್ ಕಚೇರಿಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.‌

Home add -Advt

ಎಡಿಎಲ್ಆರ್ ಕಚೇರಿ ರೆಕಾರ್ಡ್ ಕಿಪರ್ ಆದಪ್ಪ ಹಣ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದಿದೆ.‌

ಜಮೀನಿನ ಭೂ ದಾಖಲೆ ಕೊಡಲು ಎಂಟು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗುತ್ತಿದೆ. ರೆಕಾರ್ಡ್ ಕಿಪರ್ ಆದಪ್ಪ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ ಎಂಬ ಮಾಹಿತಿ ಇದೆ. ರೈತ ರಾಮಪ್ಪ ಕನಸಾವಿ ಎಂಬಾತನಿಂದ ಎಂಟು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಸದ್ಯ ರೆಕಾರ್ಡ್ ಕಿಪರ್ ಆದಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button