Latest

ವರುಣನಿಗೂ 5 ದಿನ ರಜೆ!; ದೀಪಾವಳಿ ನಿರಾತಂಕ; ನಿಟ್ಟುಸಿರು ತಂದ ಹವಾಮಾನ ಇಲಾಖೆ ವರದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯಾದ್ಯಂತ ಅಬ್ಬರಿಸಿ ಬೊಬ್ಬಿರಿದ ಮಳೆಗೆ ಅದೆಷ್ಟು ಹಾನಿಯಾಗಬೇಕಿತ್ತೋ ಆಗಿ ಹೋಗಿದೆ. ಜನ ಪಡಬೇಕಾದಷ್ಟು ಸಂಕಟವನ್ನೂ ಪಟ್ಟಿದ್ದಾರೆ. ಇದೇ ವೇಳೆ ಬಂದ ದೀಪಾವಳಿ ಸಂಭ್ರಮದ ಮೇಲೂ ಮಂಕು ಕವಿಯುವಂತೆ ಮಾಡುವ ಆತಂಕ ಸೃಷ್ಟಿಸಿದ ವರುಣನಿಗೆ ಐದು ದಿನ ರಜೆಯಂತೆ !

ಹವಾಮಾನ ಇಲಾಖೆ ಇನ್ನೈದು ದಿನ ಮಳೆಯ ಕಿರಿಕಿರಿಯಿಲ್ಲ ಎಂದು ಮುನ್ಸೂಚನೆ ನೀಡಿದೆ. ಇದರ ಬೆನ್ನಿಗೇ ಜನತೆ ಕೂಡ ನಿಟ್ಟುಸಿರು ಬಿಟ್ಟಿದೆ. ಅ.25ರವರೆಗೆ ಕರಾವಳಿ ಭಾಗದಲ್ಲಿ ಹಗುರದಿಂದ ಕೂಡಿದ ತುಂತುರು ಮಳೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Home add -Advt

ಚಂಡಮಾರುತದ ಆತಂಕವೂ ಇಲ್ಲ: 

ಈ ವಾರ ಬಂಗಾಳಕೊಲ್ಲಿಯಲ್ಲಿ ಮಾನ್ಸೂನ್ ನಂತರದ ಮೊದಲ ಚಂಡಮಾರುತ ಅಪ್ಪಳಿಸಲಿದ್ದು ಅದರ ಪರಿಣಾಮ ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿ ಮೇಲೆ ಮಾತ್ರ ಉಂಟಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಚಂಡಮಾರುತಗಳು ಸಂಭವಿಸಲಿದ್ದು ಇದನ್ನು ‘ಸೈಕ್ಲೋನ್ ಸೀಜನ್’ ಎಂದು ಪರಿಗಣಿಸಲಾಗಿದೆ.

ಸವದತ್ತಿಗೆ ಮುಖ್ಯಮಂತ್ರಿ ಬೊಮ್ಮಾಯಿ; ಆನಂದ ಮಾಮನಿ ಅಂತ್ಯಕ್ರಿಯೆಯಲ್ಲಿ ಭಾಗಿ

 

Related Articles

Back to top button