GIT add 2024-1
Beereshwara 33

ಹಸಿರನ್ನು ಉಳಿಸುವುದಷ್ಟೇ ಅಲ್ಲ, ಅವುಗಳ ಅರಿವಿರಲಿ

Anvekar 3
Cancer Hospital 2

ಲೇಖನ: ರವಿ ಕರಣಂ

ಭಾರತ ದೇಶದಲ್ಲಿ ಅನೇಕ ಜಾತಿಯ ಗಿಡಮರಗಳು ಹೇರಳವಾಗಿ ಬೆಳೆಯುತ್ತವೆ. ಇಲ್ಲಿಯ ಮಣ್ಣು,ನೀರು, ಹವಾಗುಣಕ್ಕೆ ತಕ್ಕಂತೆ ಸಮೃದ್ಧವಾಗಿ ಬೆಳೆಯುವ ಗಿಡಗಳ ಸಂಖ್ಯೆಗೆ ಕೊರತೆಯೇನೂ ಇಲ್ಲ. ಅವುಗಳ ಬಗೆಗೆ ತಿಳಿದುಕೊಳ್ಳುವುದು ಕೂಡ ತುಂಬಾ ಕಷ್ಟಕರವೇ. ಅಷ್ಟು ಪ್ರಮಾಣದಲ್ಲಿ ಗಿಡಮರಗಳು ನಮ್ಮಲ್ಲಿ ಬೆಳೆಯುತ್ತವೆ. ಹಿಮಾಲಯ, ಗಂಗಾ ನದಿ ಬಯಲು ಭೂಮಿ, ಪಶ್ಚಿಮ ಘಟ್ಟಗಳು, ಸಮುದ್ರ ತೀರಗಳು ಹೀಗೆ ದೇಶದ ನಾನಾ ಭಾಗಗಳಲ್ಲಿ ಇರಬಹುದಾದ ಸಮೃದ್ಧ ಹಸಿರನ್ನು ಉಳಿಸುವುದಲ್ಲದೇ ಅವುಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕಿದೆ. ಇಲ್ಲಿ ಮುಖ್ಯವಾಗಿರುವ ಹತ್ತು ಮರಗಳ ಪರಿಚಯವನ್ನು ಮಾಡಿಕೊಡಲಾಗಿದೆ.

ತೇಗ:

ತೇಗದ ಮರ ಗಂಧದ ಮರದಷ್ಟೇ ಪ್ರಾಮುಖ್ಯತೆ ಪಡೆದಿದೆ. ಎತ್ತರಕ್ಕೆ ಬೆಳೆಯುವ ಮರವಾಗಿದೆ. ಇದರ ವೈಜ್ಞಾನಿ ಹೆಸರು: ಟೆಕ್ಟೋನ್ ಗ್ರಾಂಡಿಸ್. ವರ್ಬಿನೇಸಿ ಎಂಬ ಕುಟುಂಬಕ್ಕೆ ಸೇರಿದೆ. ದೀರ್ಘ ಬಾಳಿಕೆಗೆ ಬರುವುದರ ಫಲವಾಗಿ, ಮನೆಗಳಿಗೆ ಮತ್ತು ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಬಹು ಉಪಕಾರಿ. ಇದರ ಬೀಜಗಳು ಔಷಧಿಯ ಗುಣಗಳನ್ನು ಹೊಂದಿದೆ. ಇದು ಎಲೆ ಉದುರಿಸಿ, ಮತ್ತೆ ಎಲೆಗಳನ್ನು ಪಡೆಯುವ ಮರವಾಗಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಆಗ್ನೇಯ ಏಶಿಯಾದಲ್ಲಿಯೂ ಕಾಣುತ್ತವೆ. ಮಾನ್ಸೂನ್ ಕಾಡುಗಳಲ್ಲಿ ಹೇರಳವಾಗಿವೆ.

ಅರಳಿ ಮರ:

ಇದು ಭಾರತದ ನೆಲದಲ್ಲಿ ಉದಯಿಸಿದ ವೃಕ್ಷ. ದೈವತ್ವ ಪಡೆದ ಈ ಮರವನ್ನು ಎಲ್ಲೆಡೆ ಕಾಣಬಹುದು. ವರ್ಷ ಪೂರ ಹಸಿರೆಲೆಗಳಿಂದ ಕಂಗೊಳಿಸುವ ಈ ಮರ ಬೃಹದಾಕಾರವಾಗಿ ಬೆಳೆಯುವುದು. ಇದು ಮೊರೇಸೀ ಕುಟುಂಬಕ್ಕೆ ಸೇರಿದ್ದು, ಫೈಕಸ್ ರಿಲಿಜಿಯೋಸ ಇದರ ವೈಜ್ಞಾನಿಕ ಹೆಸರು. ಭಾರತೀಯರ ಇದನ್ನು ಅಶ್ವತ್ಥವೃಕ್ಷ ಎಂದು ಪೂಜಿಸುತ್ತಾರೆ. ದೀರ್ಘ ಕಾಲ ಬದುಕಬಲ್ಲದು. ಶತ ಶತಮಾನಗಳ ಕಾಲ ಬದುಕಿದ್ದರ ಬಗ್ಗೆ ಸಸ್ಯ ಶಾಸ್ತ್ರಜ್ಞರು ತೋರಿಸಿಕೊಟ್ಟಿದ್ದು ಇದೆ.

ಮಾವಿನ ಮರ
ಇದಂತೂ ಅತ್ಯಂತ ಚಿರ ಪರಿಚಿತ ಮರ. ಬೇಸಿಗೆಯಲ್ಲಿ ರುಚಿಕರವಾದ,ಮಧುಭರಿತವಾದ
ಹಣ್ಣುಗಳನ್ನು ತಿನ್ನದವರೇ ಇಲ್ಲ. ಹಣ್ಣುಗಳ ರಾಜನೆಂದು ಬಣ್ಣಿಸಲ್ಪಡುವ ಇದು, ಭಾರತದ ಅತಿ ಮುಖ್ಯ ಮರವಾಗಿದೆ. ಮ್ಯಾಂಗಿಫೆರಾ ಇಂಡಿಕಾ ಇದರ ವೈಜ್ಞಾನಿಕ ನಾಮಧೇಯ. ಇದು ಅನಾಕಾರ್ಡಿಯೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ. ದೊಡ್ಡ ಮರವಾಗಿದ್ದು ಹಣ್ಣುಗಳಂತೂ ಅವರ್ನೀಯ. ಇದರಲ್ಲಿ ನಾನಾ ಬಗೆಯಿವೆ.

ಹುಣಸೇ ಮರ


ನಮಗೆಲ್ಲ ಅತ್ಯಂತ ಚಿರಪರಿಚಿತ. ಇದನ್ನು ಟ್ಯಾಮರಿಂಡ್ (Tamarind) ಎಂದು ಕರೆಯಲಾಗುತ್ತದೆ. ಎಲ್ಲ ವಾತಾವರಣಕ್ಕೂ ಇದು ಹೊಂದಿಕೊಳ್ಳ ಬಲ್ಲದು ಮತ್ತು ಬೆಳೆಯುವಂತಹುದು.ಉಷ್ಣವಲಯದ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಫಬಾಸೇ ಕುಟುಂಬದ  ತಮರೈಂಡಸ್ ಜಾತಿಗೆ ಒಂದು ಮರವಾಗಿದೆ. ಇದರ ಹಣ್ಣು ಸಾಂಬಾರ ಪದಾರ್ಥಗಳ ಗುಂಪಲ್ಲೇ ಬಂದು ಸೇರಿಕೊಂಡಿದೆ. ಇದನ್ನು ಬಳಸಿ ನಾವೆಲ್ಲ ಆಹಾರವನ್ನು ತಯಾರಿಸಿಕೊಳ್ಳುತ್ತೇವೆ. ಹುಣಸೆಹಣ್ಣು ಹುಳಿಯಾಗಿರಲು ಕಾರಣ ಟಾರ್ಟಾರಿಕ್ ಆಮ್ಲ, ಆಂಟಿ ಆಕ್ಸಿಡೆಂಟ್ ಕಾರಣವಾಗಿದೆ.

ಬೇವಿನ ಮರ:

Emergency Service

ಇದರ ಮೂಲ ಹೆಸರು ಅರಿಸ್ಟಾ. ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇದರ ಬೀಜಗಳಿಂದ ಎಣ್ಣೆ ತೆಗೆದು, ಹಲವು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇದರ ಎಳೆಯ ಟೊಂಗೆಗಳನ್ನು ಗ್ರಾಮೀಣ ಭಾಗದ ಜನ ಹಲ್ಲುಜ್ಜಲು ಬಳಸುತ್ತಾರೆ. ಬೇವಿನ ಮರ ವಿಶೇಷವಾಗಿ ಬಯಲು ಸೀಮೆಯ ಭಾಗದಲ್ಲಿ ಬೆಳೆಯುವಂತಹುದು. ಇದು ಎಲ್ಲ ಹವಾಮಾನಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಹೆಚ್ಚಾಗಿ ಸಮ ಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ. ಇದರ ನೆರಳು ತಂಪು. ಹಾಗಾಗಿ ನಮ್ಮ ಜನಪದರು ಇದರ ಮಹತ್ವವನ್ನು ತಮ್ಮ ಸಾಲುಗಳಲ್ಲಿ ಸೇರಿಸಿರುವುದು ಗೊತ್ತು.

ಮುತ್ತುಗ:


ನಿಮಗೆ ಮುತ್ತುಗ ಎಂದೊಡನೆ ನೆನಪಾಗುವುದು ಎಲೆಗಳಿಂದ ಊಟದ ತಟ್ಟೆ ಮಾಡುತ್ತಿದ್ದುದು ನೆನಪಿಗೆ ಬರಲೇ ಬೇಕು. ಅವೇ ಮುತ್ತುಗ ಮರದೆಲೆಗಳು. ಇದು ಔಷಧಿಯ ಗುಣಗಳನ್ನು ಹೊಂದಿದೆ. ಬುಟೆಯಾ ಮೋನೋಸ್ಪರ್ಮ ಎಂಬುದು ಇದರ ವೈಜ್ಞಾನಿಕ ಹೆಸರು. ಫಾಬಸಿಯೆ ಕುಟುಂಬಕ್ಕೆ ಸೇರಿದೆ. ಮುತ್ತುಗ ಎಲ್ಲ ವಾತಾವರಣದಲ್ಲೂ ಬೆಳೆಯುವಂತಹದ್ದು.

ನೇರಳೆ:

ಇದು ವರ್ಷ ಪೂರ್ತಿ ಹಸಿರಿನಿಂದ ಕಂಗೊಳಿಸುವ ಮರ. ಇದು ಭಾರತವೊಂದೇ ಅಲ್ಲದೆ, ಜಗತ್ತಿನಾದ್ಯಂತ ಬೆಳೆಯಬಹುದಾದ, ಹೆಚ್ಚಾಗಿ ಏಶಿಯಾ ಖಂಡದಲ್ಲಿ ಭಾರತದ ಮೂಲವೆಂದು ಗುರುತಿಸಿಕೊಂಡಿರುವ ಮರ. ಇದರ ಹಣ್ಣು ಬಲು ಉಪಕಾರಿ. ಮಧುಮೇಹಿಗಳ ಔಷಧಿಗಾಗಿ ಬಳಸಲ್ಪಡುತ್ತದೆ. ಆಂಗ್ಲಭಾಷೆಯಲ್ಲಿ ಬ್ಲಾಕ್ ಪ್ಲಮ್ ಎಂಬ ಹೆಸರಿದೆ.

ಮತ್ತಿ ಗಿಡ:


ಮತ್ತಿ ಗಿಡದಲ್ಲಿ ಎರೆಡು ತರಹದ ಮರಗಳನ್ನು ಕಾಣಬಹುದು. ಕರಿ ಮತ್ತಿ ಮತ್ತು ಬಿಳಿ ಮತ್ತಿ.
ಅರ್ಜುನ ಮರವೆಂದು ಭಾರತೀಯರು ಕರೆಯುವುದುಂಟು. ಆಯುರ್ವೇದ ಔಷಧ ಪದ್ಧತಿಯಲ್ಲಿ ಈ ಸಸ್ಯದ ಬಳಕೆಯಲ್ಲಿದೆ. ಇದು ಟರ್ಮಿನಲಿಯಾ ಕುಟುಂಬಕ್ಕೆ ಸೇರಿದೆ. ಕಾಡು ಬಾದಾಮಿ ಮರದ ಹತ್ತಿರದ ಸಂಬಂಧಿ ಎಂದೇ ಹೇಳಲಾಗಿದೆ. ಇದು ದಕ್ಷಿಣ ಏಶಿಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ ಪಶ್ಚಿಮಘಟ್ಟ ಹಾಗೂ ಮಿಶ್ರಪರ್ಣಪಾತಿ (Mixed deciduous) ಅರಣ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಸಾಗುವಾನಿ ಕಟ್ಟಿಗೆಯ ನಂತರ ಮಹತ್ವದ ಸ್ಥಾನ ಪಡೆದಿದ್ದು, ಮನೆ ನಿರ್ಮಾಣ ಕಾರ್ಯದಲ್ಲಿ, ತೊಲೆಗಳು, ಬಾಗಿಲುಗಳು ಮತ್ತಿತರ ವಸ್ತುಗಳಿಗಾಗಿ ಬಳಸುವಂತಹ ಗಟ್ಟಿ ಮುಟ್ಟಾದ ಮರ.

ಅತ್ತಿ ಮರ:
ಇದು ಹಣ್ಣು ಬಿಡುವ ಮರ. ಇದನ್ನು ಸಹ ಔಷಧಿಗಳಿಗಾಗಿ ಬಳಸುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ನಾವು ಇವುಗಳನ್ನು ಕಾಣುತ್ತೇವೆ. ಎಂತಹ ವಾತಾವರಣಕ್ಕೂ ಕೂಡಾ ಹೊಂದಿಕೊಳ್ಳುವ ಮರವಿದು. ಆದರೂ ಉಷ್ಣ ವಲಯದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತದಲ್ಲಿ ಹೆಚ್ಚಾಗಿ ಕಾಣುತ್ತವೆ. ಇದರ ಹಣ್ಣುಗಳು ಕೆಂಪಾಗಿದ್ದು ಚಿಕ್ಕ ಚಿಕ್ಕ ಹುಳುಗಳಿಂದ ತುಂಬಿಕೊಂಡಿರುತ್ತವೆ. ಇದರ ಹಲಗೆಗಳಿಂದ ಗೃಹೋಪಯೋಗಿ ವಸ್ತುಗಳನ್ನು ಸಹ ಮಾಡಿಕೊಳ್ಳುತ್ತಾರೆ.

ಜಾಲಿ ಮರ:


ಲೆಗ್ಯುಮಿನೋಸೀ ಕುಟುಂಬಕ್ಕೆ ಸೇರಿದ ಅಕೇಸಿಯ ಅರ್ಯಾಬಿಕ ಎಂಬುದು ಇದರ ವೈಜ್ಞಾನಿಕ ಹೆಸರು. ಎತ್ತರವಾಗಿ ಬೆಳೆಯುವ ಈ ಮರದ ತುಂಬಾ ಮುಳ್ಳುಗಳನ್ನು ಹೊಂದಿರುತ್ತದೆ. ಇದು ಒಣ ಹವಾಗುಣದಲ್ಲಿ ಯಥೇಚ್ಛವಾಗಿ ಬೆಳೆಯತ್ತವೆ. ಆದಾಗ್ಯೂ ಅತೀ ಉಷ್ಣವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಪಾಕಿಸ್ತಾನದ ಸಿಂಧ್, ಆಫ್ರಿಕದ ಉಷ್ಣಪ್ರದೇಶ ಹಾಗೂ ದಕ್ಷಿಣ ಭಾರತವು ಇವುಗಳ ಮೂಲ ಸ್ಥಳ. ಮೆಕ್ಕಲುಮಣ್ಣು ಮತ್ತು ಎರೆಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಇವುಗಳನ್ನು ಮನೆಗಳಿಗೂ ಬಳಸುವುದಿದೆ.

Laxmi Tai add
Bottom Add3
Bottom Ad 2