Wanted Tailor2
Cancer Hospital 2
Bottom Add. 3

ಅರಣ್ಯ ಸಿಬ್ಬಂದಿ ಮೇಲೆ ಗ್ರಾಮಸ್ಥರ ದಾಳಿ: ಹಲವರಿಗೆ ಗಾಯ, ವಾಹನಗಳು ಜಖಂ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ತಾಲೂಕಿನ ಏರುಪಟ್ಟಿ ಎಂಬಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗ್ರಾಮಸ್ಥರು ದಾಳಿ ಮಾಡಿದ್ದು, ಹಲವು ಸಿಬ್ಬಂದಿಗೆ ಗಾಯಗಳಾಗಿವೆ. ಅನೇಕ ವಾಹನಗಳು ಜಖಂ ಗೊಂಡಿವೆ. ಈ ಸಂಬಂಧ 20ಕ್ಕೂ ಹೆಚ್ಚು ಗ್ರಾಮಸ್ಥರ ವಿರುದ್ಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಘಟನೆ ನಡೆದಿದ್ದು, ಗ್ರಾಮಸ್ಥರು ಅತಿಕ್ರಮಿಸಿರುವ ಅರಣ್ಯ ಇಲಾಖೆ ಜಾಗವನ್ನು ಸಿಬ್ಬಂದಿ ತೆರವುಗೊಳಿಸಿ ಗಿಡ ನೆಡುವ ಪ್ರಯತ್ನ ನಡೆಸುತ್ತಿದ್ದಾಗ ಗ್ರಾಮಸ್ಥರು ದಾಳಿ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರೊಂದಿಗೆ ತೆರಳಿದ್ದರೂ ಗ್ರಾಮಸ್ಥರ ಗುಂಪು ಕಲ್ಲು ತೂರಿ ದಾಳಿ ಮಾಡಿದೆ.

ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅನೇಕ ವಾಹನಗಳು ದಾಳಿಗೆ ತುತ್ತಾಗಿವೆ. 8 ಸಿಬ್ಬಂದಿಗೆ ಗಾಯಗಳಾಗಿವೆ. ಈ ಕುರಿತು ವಲಯ ಅರಣ್ಯಾಧಿಕಾರಿ ಸಂಜಯ ಸಂಶುದ್ಧಿ ಪೊಲೀಸ್ ದೂರು ದಾಖಲಿಸಿದ್ದಾರೆ.

Bottom Add3
Bottom Ad 2

You cannot copy content of this page