Latest

ಜಗತ್ತಿನ ಅತ್ಯಂತ ಹಿರಿಯ ‘ರಾಜಾ ಹುಲಿ’ ಇನ್ನಿಲ್ಲ; 25ವರ್ಷ 10 ತಿಂಗಳ ಬದುಕಿಗೆ ವಿದಾಯ

ಪ್ರಗತಿವಾಹಿನಿ ಸುದ್ದಿ, ಕೋಲ್ಕೊತ್ತಾ: ಜಗತ್ತಿನಲ್ಲಿ ಅತ್ಯಂತ ಸುದೀರ್ಘ ಅವಧಿ ಬದುಕಿದ್ದ ಪಶ್ಚಿಮ ಬಂಗಾಳದ  ಅಲಿಪುರದೂರ ಜಿಲ್ಲೆಯ ಜಲದಾಪುರ ಅರಣ್ಯ ಪ್ರದೇಶದ  ರಾಯಲ್ ಬೆಂಗಾಲ್  ಹುಲಿ ‘ರಾಜಾ’ ಸೋಮವಾರ ಅಸುನೀಗಿದೆ.

ಪಶ್ಚಿಮ ಬಂಗಾಳದ ದಕ್ಷಿಣ ಖೈರ್ ಬಾರಿ ರಕ್ಷಣಾ ಕೇಂದ್ರದದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ  ತನ್ನ 20 ವರ್ಷ 10 ತಿಂಗಳ ಬದುಕಿಗೆ  ವಿದಾಯ ಹೇಳಿದ ರಾಜಾ ಸಾವಿಗೆ ಕೇಂದ್ರ ಪರಿಸರ ಸಚಿವ ಭೂಪಿಂದರ್ ಯಾದವ, ಸಂಸದ  ಪಿ.ಸಿ. ಮೋಹನ ಸೇರಿದಂತೆ ಹಲವು ಗಣ್ಯರು, ವನ್ಯಜೀವಿ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

” 25 ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿದ ಹುಲಿ ನಮ್ಮ ಹೆಮ್ಮೆ” ಎಂದು ಭೂಪಿಂದರ್ ಯಾದವ ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಹುಲಿಗಳು 16ರಿಂದ 18 ವರ್ಷ ಮಾತ್ರ ಬದುಕಬಲ್ಲವು. ಆದರೆ ರಾಜಾ 25ಕ್ಕೂ ಹೆಚ್ಚು ವರ್ಷ ಬದುಕಿದ ಬೋನಿನ ಹುಲಿಯಾಗಿದ್ದು ಹಿರಿಯ ಅರಣ್ಯ ಅಧಿಕಾರಿಗಳು,  ಸಾರ್ವಜನಿಕರು ರಾಜಾಗೆ ಅಂತಿಮ ಗೌರವ ಸಲ್ಲಿಸಿದರು.

Home add -Advt

ಹೊಸ ಸಂಸತ್ ಭವನದಲ್ಲಿ ಕಂಚಿನ ರಾಷ್ಟ್ರೀಯ ಲಾಂಛನ ಉದ್ಘಾಟಿಸಿದ ಪ್ರಧಾನಿ ಮೋದಿ

 

Related Articles

Back to top button