ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೀರು ಸರಬರಾಜಿನ 33ಕೆವ್ಹಿ ವಿದ್ಯುತ್ ಮಾರ್ಗದಲ್ಲಿ ಹೆಸ್ಕಾಂನಿಂದ ತುರ್ತು ದುರಸ್ಥಿ ಕಾಮಗಾರಿ ಸಲುವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಅನುಮತಿ ಕೋರಿದ್ದು, ಇದರಿಂದ ಜೂನ್ 12 ಹಾಗೂ 13 ರಂದು ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ನೀರು ಸರಬರಾಜು 33ಕೆವಿ ವಿದ್ಯುತ್ ಮಾರ್ಗದಲ್ಲಿ ಹೆಸ್ಕಾಂನಿಂದ ಜೂನ್ 12 ರಂದು ತುರ್ತು ದುರಸ್ಥಿ ಕಾಮಗಾರಿ ಕೈಗೊಳ್ಳುವ ಸಲುವಾಗಿ ವಿದ್ಯುತ್ ಸ್ಥಗಿತಗೊಳಿಸಲು ಅನುಮತಿ ಕೋರಲಾಗಿದೆ. 110ಕೆವಿ ಹಿಡಕಲ್ ಡ್ಯಾಂ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 33ಕೆವಿ ಕುಂದರಗಿ-ತುಮ್ಮರಗುದ್ದಿ ಬೆಳಗಾವಿ ನೀರು
ಸರಬರಾಜು ಮಾರ್ಗದಲ್ಲಿ ಮಾರ್ಕಂಡೇಯ ನದಿಯ ಎರಡು ಬದಿಯಲ್ಲಿ ಟಾವರ್ ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ. ಇದರಿಂದ ಪ್ರಸ್ತುತ ಇರುವ ನೀರು ಸರಬರಾಜು ವೇಳಾಪಟ್ಟಿ ಜೂನ್ 12 ಹಾಗೂ 13ರಂದು ಎರಡು ದಿನಗಳಿಗೆ ಮುಂದುವರಿಯುತ್ತದೆ. ಈ ಎರಡೂ ದಿನ ಬೆಳಗಾವಿ ನಗರದ ನಿರ್ದಿಷ್ಟ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯ
ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನೀರು ಸರಬರಾಜು ವ್ಯತ್ಯಯ ಉಂಟಾಗುವ ಪ್ರದೇಶಗಳು:
ಬೆಳಗಾವಿ ದಕ್ಷಿಣ: ಬ್ರಹ್ಮ ನಗರ, ಮಜಗಾಂವ, ಭಾರತ್ ನಗರ, ಕಪಿಲೇಶ್ವರ ಕಾಲೋನಿ, ದಕ್ಷಿಣ ಡೆಮೊ ವಲಯ, ಆರ್‌ಸಿ ನಗರ 1 ಮತ್ತು 2ನೇ ಹಂತಕ್ಕೆ ಒಳಪಡುವ ಉಪ ಪ್ರದೇಶಗಳು, ನಜರ್ ಕ್ಯಾಂಪ್, ಸಮೃದ್ಧಿ ಕಾಲೋನಿ, ಯಳ್ಳೂರು ರಸ್ತೆ, ರಾನಡೆ ಕಾಲೋನಿ,
ಹಿಂದವಾಡಿ, ನಾನಾವಾಡಿ. ಚಿದಂಬರ್ ನಗರ, ಶಹಾಪುರ, ವಡಗಾಂವ್, ಹಳೇ ಬೆಳಗಾವಿ.
ಬೆಳಗಾವಿ ಉತ್ತರ: ಸಹ್ಯಾದ್ರಿ ನಗರ, ಕುವೆಂಪು ನಗರ, ಟಿವಿ ಕೇಂದ್ರ, ಸದಾಶಿವ ನಗರ, ಬಸವ ಕಾಲೋನಿ, ಕಲ್ಮೇಶ್ವರ ನಗರ, ಸುಭಾಸ್ ನಗರ, ಅಶೋಕ್ ನಗರ, ಎಂಎಂ ಬಡಾವಣೆ ಏರಿಯಾ, ಹೊಸ ಗಾಂಧಿ ನಗರ, ಕಣಬರ್ಗಿ, ಕುಡಚಿ ಹಾಗೂ ಸುಭಾಷ್ ನಗರ,
ವೀರಭದ್ರನಗರ, ಅಲರವಾಡ ಎಂಇಎಸ್ ಕಂಟೋನ್ಮೆಂಟ್ ಮತ್ತು ಸೈನಿಕ ನಗರ ಹಾಗೂ
ಕಂಟೋನ್ಮೆಂಟ್ ಪ್ರದೇಶ, ಹಿಂಡಾಲ್ಕೊ ಕಾರ್ಖಾನೆ, ಕೆಎಐಡಿಬಿ ಕೈಗಾರಿಕಾ ಪ್ರದೇಶ, ಎನ್-ರೂಟ್ ವಿಲೇಜ್ ಟ್ಯಾಪಿಂಗ್ಸ್, ಡಿಫೈಯನ್ಸ್ ಏರಿಯಾ, ಸೈನಿಕ ನಗರ, ಕೆಎಲ್‌ಇ ಆಸ್ಪತ್ರೆ, ಬಿಮ್ಸ್ ಆಸ್ಪತ್ರೆ, ಆರ್.ಸಿ ನಗರ ಹಾಗೂ ಎಲ್ಲ ಸಗಟು ನೀರು ಪೂರೈಕೆ ಸ್ಥಗಿತಗೊಳ್ಳಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ