ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳಗಾವಿ ಜಿಲ್ಲೆ ವತಿಯಿಂದ ಶುಕ್ರವಾರ 2ನೇ ಆಂಬುಲೆನ್ಸ ಸೇವೆಯನ್ನು ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿಮಠ ಹಾಗೂ ಚಿತ್ ಪ್ರಕಾಶಾನಂದ ಮಹಾಸ್ವಾಮಿಜಿಗಳು ಚಿನ್ಮಯ ಮಿಷನ್ ತಿಲಕ್ವಾಡಿ ಇವರಿಬ್ಬರಿಂದ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಜೀವದ ಹಂಗು ತೊರೆದು ಸಮಾಜದ ಸೇವೆಯಲ್ಲಿ ಜಾತಿಭೇದ ಮಾಡದೇ ಶ್ರದ್ಧಾಭಕ್ತಿಯಿಂದ ಕಾರ್ಯ ಮಾಡುತ್ತಾರೆ. ಇವರ ಕಾರ್ಯದಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ಶ್ರೀ ಚಿತ್ ಪ್ರಕಾಶಾನಂದ ಮಹಾಸ್ವಾಮಿಗಳು ಮಾತನಾಡಿ ಅಕ್ಷಯ ತೃತೀಯ ಹಾಗೂ ಬಸವಜಯಂತಿಯ ಈ ಶುಭದಿನದಂದು ಲೋಕಾರ್ಪಣೆ ಮಾಡಿರುವುದು ಸಂತೋಷದ ಸಂಗತಿ, ತುರ್ತು ಪರಿಸ್ಥಿತಿ ಇರುವ ರೋಗಿಗಳಿಗಾಗಿ ಸಾರ್ವಜನಿಕರಿಗೆ ದಿನದ 24 ಘಂಟೆ ಸೇವೆ ಒದಗಿಸುವ ಇದು ಪುಣ್ಯದ ಕಾರ್ಯ ಎಂದು ಶ್ಲಾಘನೆ ಮಾಡಿದರು.
ಈ ಅಂಬುಲನ್ಸ ಪ್ರಾರಂಭಿಸಲು ರೊಟರಿ ಕ್ಲಬ್ ದಕ್ಷಿಣ, ಗುಜರಾತಿ ಸಮಾಜ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕೈ ಜೋಡಿಸಿದರು. ಈ ಸಂದರ್ಭದಲ್ಲಿ ಈ ಸೇವೆಯನ್ನು ಮನಗಂಡ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಅವರು ಒಂದು ಲಕ್ಷ ರೂ ಚೆಕ್ ವಿಶ್ವ ಹಿಂದು ಪರಿಷತ್ ಬೆಳಗಾವಿ ಕರ್ನಾಟಕ ಉತ್ತರ ಸಂಸ್ಥೆಗೆ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಪ್ರಾಂತ ಪ್ರಚಾರಕ ನರೇಂದ್ರಜೀ, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣಭಟ್, ಧರ್ಮ ಜಾಗರಣದ ಪ್ರಾಂತ ಪ್ರಮುಖ ದಿಲೀಪ್ ವೆರ್ಣೆಕರ್, ವಿದ್ಯಾಭಾರತಿ ಪ್ರಮುಖರೂ, ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷರಾದ ಪರಮೇಶ್ವರ ಹೆಗಡೆ, ವಿ ಹಿ ಪ ನ ವಿಭಾಗ ಸಹ ಕಾರ್ಯದರ್ಶಿ ಅಚ್ಚುತ ಕುಲಕರ್ಣಿ, ಭರತೇಶ್ ಶಿಕ್ಷಣ ಸಂಸ್ಥೆಯ ಖಜಾಂಚಿ ವಿನೋದ್ ದೊಡ್ಡಣ್ಣ ವರ್, ರೋಟರಿ ಕ್ಲಬ್ ದಕ್ಷಿಣದ ಚೈತನ್ಯ ಕುಲಕರ್ಣಿ, ಗುಜರಾತಿ ಸಮಾಜದ ವಿಜಯ ಭದ್ರ, ವಿ ಹಿ ಪ ನ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಕದಂ, ನಗರ ಅಧ್ಯಕ್ಷ ಡಾಕ್ಟರ್ ಬಸವರಾಜ ಭಾಗೋಜಿ, ಬಜರಂಗದಳದ ಜಿಲ್ಲಾ ಸಂಯೋಜಕ ಭಾವಕಣ್ಣ ಲೋಹಾರ್, ನಗರ ಸಂಯೋಜಕ ಆದಿನಾಥ್ ಗಾವಡೆ ಹಾಗೂ ವಿ ಹಿ ಪ ಮತ್ತು ಭಜರಂಗ ದಳದ ಎಲ್ಲ ಜಿಲ್ಲಾ ಹಾಗು ನಗರ ಪಧಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ