ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾನೂನು ಬಾಹಿರವಾಗಿ ಆನ್ ಲೈನ್ ಆಪ್ ಗಳ ಮೂಲಕ ಸಾಲ ಕೊಡುತ್ತಿದ್ದ ಕಂಪನಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸೈಯದ್ ಅಹಮದ್, ಸೈಯದ್ ಇರ್ಫಾನ್ ಹಾಗೂ ಆದಿಯಾ ಸೇನಾಪತಿ ಬಂಧಿತ ಆರೋಪಿಗಳು. ಆರೋಪಿಗಳು ಚೀನಿ ಕಂಪನಿಗಳಾದ ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರೂಪಿ ಡೇ, ರೂಪಿ ಕಾರ್ಟ್ ಕಂಪನಿಗಳ ಮೂಲಕ ಬಡ್ಡಿ ನೀಡುತ್ತ ಸಾಲ ನೀಡುತ್ತಿದ್ದರು.
ಸಾಲ ವಸೂಲಿ ಮಾಡಿದ ಬಳಿಕ ಹೆಚ್ಚಿನ ಬಡ್ದಿ ನೀಡುವಂತೆ ಕಿರುಕುಳ ನೀಡುತ್ತಿದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದು, 35 ಲ್ಯಾಪ್ ಟಾಪ್, 200 ಬೇಸಿಕ್ ಮೊಬೈಲ್, ವಿವಿಧ ಬ್ಯಾಂಕ್ ಗಳ 8 ಚೆಕ್ ಗಳು, 6 ಒಪೊ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ