ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಪದ್ಮಶ್ರೀ ಡಾ.ಸುಧಾ ಮೂರ್ತಿ ಭೇಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶೀಘ್ರದಲ್ಲೇ ಪ್ರಾರಂಭವಾಗಲಿರುವ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆಗೆ ಖ್ಯಾತ ಶಿಕ್ಷಣ ತಜ್ಞೆ, ಲೇಖಕಿ, ಪದ್ಮಶ್ರೀ ಡಾ.ಸುಧಾ ಮೂರ್ತಿ ಶನಿವಾರ ಭೇಟಿ ನೀಡಿದರು.
ಕೆಎಲ್‌ಇ ಸೊಸೈಟಿಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಹುಬ್ಬಳ್ಳಿಯ ಕೆಎಲ್‌ಇ ಟೆಕ್ನಾಲಜಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.(ಡಾ.) ಅಶೋಕ ಶೆಟ್ಟರ್ ಅವರೊಂದಿಗೆ ಸುಧಾ ಮೂರ್ತಿ ಆಗಮಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಡಾ. ಎಂ ವಿ ಜಾಲಿ ಅವರು ಡಾ.ಸುಧಾ ಮೂರ್ತಿ ಅವರಿಗೆ ಆಸ್ಪತ್ರೆಯ ಕುರಿತು ಸಂಪೂರ್ಣ ವಿವರ ನೀಡಿದರು.
ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಸರ್ಕಾರಿ ಬೆಂಬಲಿತ ಉಪಕ್ರಮಗಳ ಮೂಲಕ ಉಚಿತ ಸೇವೆಗಳು ಲಭ್ಯವಾಗಲಿವೆ. ಸಮಗ್ರ ಕ್ಯಾನ್ಸರ್ ಆರೈಕೆಗಾಗಿ 300 ಹಾಸಿಗೆಗಳ ಸೌಲಭ್ಯ ಒದಗಿಸಲಾಗುತ್ತಿದೆ.
ಡಾ. ಮೂರ್ತಿ ಅವರು ಸುಧಾರಿತ ವಿಕಿರಣ ಆಂಕೊಲಾಜಿ ಸೇವೆಗಳನ್ನು ಸಹ ವೀಕ್ಷಿಸಿದರು. ಮೂಳೆ ಮಜ್ಜೆಯ ಕಸಿ ಘಟಕಗಳ ಬಗ್ಗೆ ಆಸಕ್ತಿಯಿಂದ ಆಲಿಸಿದರು. ಅವರ ಭೇಟಿಯ ವೇಳೆ ಎಲ್ಲಾ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ