Latest

ಮಕ್ಕಳ ಕಳ್ಳರೆಂದು ಕಾರು ಬೆನ್ನಟ್ಟಿದ ಗ್ರಾಮಸ್ಥರು; ತಪ್ಪಿಸಿಕೊಳ್ಳುವ ಬರದಲ್ಲಿ ಪಲ್ಟಿಯಾಗಿ ಬಿದ್ದ ಕಾರು

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಮಕ್ಕಳ ಕಳ್ಳರ ವದಂತಿ ರಾಜ್ಯಾದ್ಯಂತ ಹರಿದಾಡುತ್ತಿದ್ದು, ವದಂತಿ ಹಬ್ಬಿದ ಬೆನ್ನಲ್ಲೇ ಆತಂಕಗೊಂಡಿರುವ ಗ್ರಾಮಸ್ಥರು ಹಲವರ ಮೇಲೆ ಹಲ್ಲೆಗೆ ಮುಂದಾಗುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದರ ಬೆನ್ನಲ್ಲೇ ಇದೀಗ ಅಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಮಕ್ಕಳ ಕಳ್ಳರೆಂದು ಅಟ್ಟಿಸಿಕೊಂಡು ಹೋದ ಪರಿಣಾಮ ತಪ್ಪಿಸಿಕೊಳ್ಳಲು ಮುಂದಾದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ಮಕ್ಕಳ ಕಳ್ಳರು ಎಂದು ಅನುಮಾನಗೊಂಡ ಗ್ರಾಮಸ್ಥರು ಬೈಕ್ ನಲ್ಲಿ ಕಾರನ್ನು ಬೆನ್ನಟ್ಟಿದ್ದು, ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಬಳಿ ನಡೆದಿದೆ.

Home add -Advt

ಘಟನೆಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ದೇವರಾಜ ಭಾರತಿ, ಜಯದೀಪ ಜಗದಾಳೆ, ಮೊಹಮ್ಮದ್ ಇಲಿಯಾಸ್ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಎಂ ಭೇಟಿಯಾದ ಕೇರಳ ಸಿಎಂ ಪಿಣರಾಯಿ ವಿಜಯನ್; ಅವರ ಯೋಜನೆಗಳ ಪ್ರಸ್ತಾಪ ತಿರಸ್ಕರಿಸಿದ್ದೇವೆ ಎಂದ ಸಿಎಂ ಬೊಮ್ಮಾಯಿ

https://pragati.taskdun.com/latest/kerala-cm-pinarai-vijayancm-basavaraj-bommaaimeet/

Related Articles

Back to top button