ನಗೆಪಾಟಲಿಗೀಡಾದ ನಿಧಿ ಸಂಗ್ರಹ !

  ಸಂಗ್ರಹಿಸಿದ್ದು 9 ಬಿಲಿಯನ್ ಜಾಹೀರಾತಿಗೆ ಖರ್ಚಾಗಿದ್ದು 14 ಬಿಲಿಯನ್

 

ಇಸ್ಲಾಮಾಬಾದ್ – ಪಾಕಿಸ್ತಾನದಲ್ಲಿ ಸಿಂಧೂ ನದಿಗೆ ನಿರ್ಮಾಣ ಅಣೆಕಟ್ಟು ನಿರ್ಮಾಣಕ್ಕೆ ಸಾರ್ವಜನಿಕರಿಂದ ವಂತಿಗೆ ಸಂಗ್ರಹ ಮಾಡಿದ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಯ ಮೊತ್ತ 9 ಬಿಲಿಯನ್ ರೂ. ಆಗಿದ್ದರೆ ಅದರ ಜಾಹೀರಾತಿಗಾಗಿ ಖರ್ಚು ಮಾಡಿದ್ದು 14 ಬಿಲಿಯನ್ ರೂ. ಎಂದು ಲೆಕ್ಕ ತೋರಿಸಲಾಗಿದ್ದು ಇದೊಂದು ದೊಡ್ಡ ಹಗರಣವೆಂಬ ಆರೋಪ ಕೇಳಿ ಬರುತ್ತಿದೆ.

ಸಿಂಧೂ ನದಿಗೆ ಡೈಮರ್ ಭಾಷಾ ಆಣೆಕಟ್ಟು ನಿರ್ಮಾಣದ ಪ್ರಸ್ತಾವನೆ 1980ರಲ್ಲಿಯೇ ಸಲ್ಲಿಕೆಯಾಗಿತ್ತು. ಆದರೆ ಕಾರಣಾಂತರಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಆದರೆ 2018ರಲ್ಲಿ ಪಾಕಿಸ್ತಾನದ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಸಾಕಿಬ್ ನಿಸಾರ್ ಅವರು ಈ ಯೋಜನೆಯನ್ನು ಮುನ್ನೆಲೆಗೆ ತಂದರು. ಈ ಅಣೆಕಟ್ಟು ನಿರ್ಮಾಣದ ವಿಷಯ ಮುಂದಿಟ್ಟು ಸಾರ್ವಜನಿಕರಿಂದ ಚಂದಾ ಸಂಗ್ರಹಿಸಲು ಮುಂದಾದರು.

ಮಹತ್ವದ ಆಣೆಕಟ್ಟು ನಿರ್ಮಾಣವಾಗುತ್ತಿರುವುದು ಮತ್ತು ಸ್ವತಃ ಸುಪ್ರಿಂ ಕೋರ್ಟಿನ ನ್ಯಾಯಾಧೀಶರೇ ಮುಂದಾಳತ್ವ ವಹಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಶ್ರೀಮಂತರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಶಕ್ಯಾನುಸಾರ ದೇಣಿಗೆ ನೀಡಿದ್ದಾರೆ. ಪಾಕಿಸ್ತಾನ ಮಿಲಿಟರಿ ತನ್ನ ಸೈನಿಕರ ಸಂಬಳ ಕಡಿತ ಮಾಡಿ 1 ಬಿಲಿಯನ್ ನೀಡಿದ್ದರೆ, ಪಾಕಿಸ್ತಾನ ಕ್ರಿಕೇಟ್ ತಂಡ ಸಹ ಸಾಕಷ್ಟು ಹಣ ನೀಡಿದೆ. ಆದರೆ ಬಳಿಕ ಈ ವಿಷಯ ಪಾಕಿಸ್ತಾನದ ಜನ ಬಹುತೇಕ ಮರೆತೇ ಬಿಟ್ಟಿದ್ದರು.

ಆದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ನೆರೆ ಹಾವಳಿಯಿಂದಾಗಿ ಅಣೆಕಟ್ಟೆಗಳೆಲ್ಲ ತುಂಬಿ ಉಕ್ಕಿ ಹರಿಯತೊಡಗಿದಾಗ ಡೈಮೆರ್ ಭಾಷಾ ಆಣೆಕಟ್ಟೆಯ ವಿಷಯ ನೆನಪಾಗಿದೆ ವಿಚಾರಣೆ ಮಾಡಲಾಗಿ ಆಣೆಕಟ್ಟೆ ನಿರ್ಮಾಣಕ್ಕೆ ಸಂಗ್ರಹಿಸಿದ ಹಣಕ್ಕಿಂತ ಅದರ ಪ್ರಚಾರದ ಜಾಹೀರಾತಿಗೆ ಹೆಚ್ಚು ಹಣ ಖರ್ಚಾಗಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪಾರ್ಲಿಮೆಂಟರಿ ಅಕೌಂಟ್ಸ್ ಕಮಿಟಿ ಈ ವಿಷಯ ಸ್ಪಷ್ಟಪಡಿಸಿದೆ.

ಈ ಬಗ್ಗೆ ನಿವೃತ್ತ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ ಅವರನ್ನು ವಿಚಾರಿಸಲಾಗಿ, ತಾನು ಅಣೆಕಟ್ಟೆ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿರಲಿಲ್ಲ, ಬದಲಿಗೆ ಅಣೆಕಟ್ಟೆ ನಿರ್ಮಾಣದ ಕುರಿತು ಜಾಗ್ರತಿ ಮೂಡಿಸುವ ಸಲುವಾಗಿ ಹಣ ಸಂಗ್ರಹಿಸುತ್ತಿದ್ದೆ,  ಸಾಕಷ್ಟು ಪ್ರಚಾರವನ್ನು ನೀಡಲಾಗಿದೆ ಎಂದಿದ್ದಾರಂತೆ. ಅಣೆಕಟ್ಟೆ ನಿರ್ಮಾಣಕ್ಕೆ ಹಣ ಕೊಟ್ಟವರೆಲ್ಲ ಪೆಚ್ಚಾಗಿದ್ದಾರೆ‌.

ಈ ಗುಜರಾತ್ ವ್ಯಕ್ತಿಯ ಖಾತೆಗೆ ಬಂದು ಬಿತ್ತು 11 ಸಾವಿರ ಕೋಟಿ ! 5 ಲಕ್ಷ ರೂ.ಲಾಭವಾದದ್ದು ಹೇಗೆ?

https://pragati.taskdun.com/latest/gujrath-man-gets-11-thousand-crores-to-his-demate-account/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button