Kannada NewsLatestUncategorized

ಪಂಚಮಸಾಲಿ 2ಎ ಮೀಸಲಾತಿ ವಿಚಾರ: ಬಹಿರಂಗ ವಿಚಾರಣೆ; ಬಸವಜಯಮೃತ್ಯುಂಜಯ ಸ್ವಾಮೀಜಿ ಪರ ವಾದ ಮಂಡನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಶಾಶ್ವತ ಹಿಂದುಳಿದ ಆಯೋಗದ ಮೂಲಕ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆಯವರು ಇಂದು ಬಹಿರಂಗ ವಿಚಾರಣೆಗೆ ಬರುವಂತೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿಯವರನ್ನು ಆಮಂತ್ರಿಸಿದ್ದರು.

ಜಗದ್ಗುರುಗಳ ಪರವಾಗಿ ಕಾನೂನು ಘಟಕದ ಅಧ್ಯಕ್ಷರಾದ ಬೆಳಗಾವಿ ದಿನೇಶ ಪಾಟೀಲ್ ಅರ್ಥಪೂರ್ಣವಾಗಿ ವಾದ ಮಂಡಿಸಿದರು. ವಾದ ಮಂಡಿಸುತ್ತಲೇ , ಈಗಾಗಲೇ ಎರಡು ವರ್ಷಗಳ ಕಾಲ ರಾಜ್ಯಾದ್ಯಂತ ಬಹುಪಾಲು ಜಿಲ್ಲೆಗಳಲ್ಲಿ ಸರ್ವೇ ಮಾಡಿ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೀರಿ.

ಮತ್ತೊಮ್ಮೆ ದಾಖಲಾತಿಗಳನ್ನು ಕೇಳಿ ಸಮಯವನ್ನು ವಿಳಂಬ ಮಾಡುವುದು ಸರಿಯಲ್ಲ. ಈಗಾಗಲೆ ಸಮೀಕ್ಷೆಯ ಮೂಲಕ ಯಾವ ದಾಖಲಾತಿಗಳನ್ನು ಸಂಗ್ರಹಿಸಿದ್ದೀರಿ? ಎಂಬುದನ್ನು ಬಹಿರಂಗ ಪ್ರಕಟಿಸಿರಿ ಎಂಬುದನ್ನು ಆಯೋಗದ ಕಣ್ಣನ್ನು ತೆರೆಸುವ ಹಾಗೆ ವಾದ ಮಂಡಿಸಿದರು. ಆಯೋಗದ ಸದಸ್ಯರೆಲ್ಲರೂ ದಿನೇಶ ಪಾಟೀಲ್ ರ ಅಭಿಪ್ರಾಯವನ್ನು ಕೇಳಿ ಸಹಮತ ವ್ಯಕ್ತಪಡಿಸಿದರು.

ಬಹಿರಂಗ ವಿಚಾರಣೆಯಲ್ಲಿ ಶ್ರೀಗಳೊಂದಿಗೆ ಗದಗ ಜಿಲ್ಲಾ ಯುವ ಅಧ್ಯಕ್ಷ ಅಯ್ಯಪ್ಪ ಅಂಗಡಿ , itbt ರಾಷ್ಟ್ರೀಯ ಅಧ್ಯಕ್ಷ ಮಲ್ಲಣಗೌಡ ಪಾಟೀಲ್ , ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು , ಸುರೇಶ್ ಪಲ್ಲೆದ ಮೊದಲಾದವರು ಉಪಸ್ಥಿತರಿದ್ದರು.

 

*ರಮೇಶ್ ಜಾರಕಿಹೊಳಿ ಸಿಡಿ ವಿಷಯ ಮಾತಾಡಿಲ್ಲ; ಸಿಎಂ ಬೊಮ್ಮಾಯಿ*

 

https://pragati.taskdun.com/ramesh-jarakiholicd-casecm-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button