ಪ್ರಗತಿವಾಹಿನಿ ಸುದ್ದಿ; ಮುಂಬೈ: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಪರಮ್ ಬೀರ್ ಸಿಂಗ್ ವಿರುದ್ಧ 15 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪವಿದ್ದು, ಈ ಪ್ರಕರಣ ಸಂಬಂಧ ಇದೀಗ ಮೂರನೇ ಬಾರಿ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಮ್ ಬೀರ್ ಸಿಂಗ್ ಜತೆ ಸಹ ಆರೋಪಿಗಳೆಂದು ಕ್ರೈಂ ಬ್ರಾಂಚ್ ನ ನಂದಕುಮಾರ್ ಗೋಪಾಲೆ ಹಾಗೂ ಶಾಶಾ ಕೊರ್ಕೆ ಅವರನ್ನು ಸಿಐಡಿ ಬಂಧಿಸಿತ್ತು. ಡೆವಲಪರ್ ಶ್ಯಾಮಸುಂದರ್ ಅಗರ್ವಾಲ್ ಅವರ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಮುಂಬೈ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಇಡಿ ಬಂಧಿಸಿದ್ದು, ಸಿಬಿಐ ಕೂಡ ತನಿಖೆಗೆ ಮುಂದಾಗಿದೆ. ಪರಮ್ ಬೀರ್ ಸಿಂಗ್ ಅನಿಲ್ ದೇಶ್ ಮುಖ್ ವಿರುದ್ಧ ಆರೋಪ ಮಾಡಿದ್ದರು.
ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ಹ್ಯಾಕರ್ ಶ್ರೀಕಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ