Belagavi NewsBelgaum NewsKannada NewsKarnataka NewsNationalTravel

*27ರಂದು ಈ ಸ್ಥಳದಲ್ಲಿ ಮಾತ್ರ ವಾಹನ ಪಾರ್ಕ್ ಮಾಡಿ: ಬೆಳಗಾವಿ ಪೊಲೀಸರ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿ. 27 ರಂದು ಬೆಳಗಾವಿ ನಗರದ ಸರದಾರ ಮೈದಾನದಲ್ಲಿ ನಡೆಯಲಿರುವ ‘ಸಂಗೀತ ಸಂಜೆ’ ಕಾರ್ಯಕ್ರಮ ನೋಡಲು ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಈ ಕೆಳಗೆ ಸೂಚಿಸಲಾದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ.

ಕಾಲೇಜ್ ರಸ್ತೆಯ ಪವನ ಹೊಟೇಲ್ ಎದುರಿಗೆ ಇರುವ ವಾಹನ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಹಳೆಯ ಕೋರ್ಟ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿಯ ಖಾಲಿ ಜಾಗೆಯಲ್ಲಿ ದ್ವಿಚಕ್ರ, ಕಾರ್ ಮತ್ತು ಇತರ ಲಘು ವಾಹನಗಳಿಗೆ ಹಾಗೂ ಸಿಪಿಎಡ್ ಮೈದಾನದಲ್ಲಿ ಲಘು ಮತ್ತು ಭಾರೀ ವಾಹನಗಳಿಗೆ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಮೇಲಿನ ಸೂಚನೆ ಪಾಲಿಸಿ, ಪೋಲೀಸರೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ‌.

Home add -Advt

Related Articles

Back to top button