
ಪ್ರಗತಿವಾಹಿನಿ ಸುದ್ದಿ; ತುಮಕೂರು: ಪ್ರೀತಿಯಿಂದ ಸಾಕಿದ್ದ ಗಿಣಿರಾಮ ಕಾಣೆಯಾಗಿದ್ದಕ್ಕೆ ಕಂಗಾಲಾಗಿರುವ ಕುಟುಂಬವೊಂದು ಗಿಳಿ ಹುಡುಕಿಕೊಡುವಂತೆ ಮನವಿ ಮಾಡಿದೆ. ಅಲ್ಲದೇ ಗಿಳಿ ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ಘೋಷಿಸಿದ್ದಾರೆ.
ತುಮಕೂರಿನ ಜಯನಗರದ ನಿವಾಸಿ ರವಿ ಕುಟುಂಬದವರು ಸ್ಪೆಷಲ್ ಗಿಳಿಯನ್ನು ಸಾಕಿದ್ದರು. ಆಫ್ರಿಕನ್ ಗ್ರೇ ಜಾತಿಯ ಎರಡು ಗಿಳಿಯನ್ನು ಸಾಕಿದ್ದು, ಅದರಲ್ಲಿ ರುಸ್ತುಮಾ ಎಂಬ ಗಿಳಿ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು, ಮನೆಯವರೆಲ್ಲ ಆತಂಕಕ್ಕೀಡಾಗಿದ್ದಾರೆ.
ಹಾಗಾಗಿ ಗಿಳಿಯನ್ನು ಹುಡುಕಿಕೊಡುವಂತೆ ಕುಟುಂಬಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮನೆಯ ಮುಂದೆ ಬ್ಯಾನರ್ ಅಳವಡಿಸಿ ಮನವಿ ಮಾಡಿದ್ದಾರೆ.
ನಮ್ಮ ಮನೆಯ ನೆಚ್ಚಿನ ಸದಸ್ಯರಲ್ಲಿ ಒಬ್ಬರಾಗಿದ್ದ ಮುದ್ದಿನ ಗ್ರೇ ಬಣ್ಣದ ಗಿಣಿ ಜುಲೈ 16ರಿಂದ ಕಾಣೆಯಾಗಿದೆ. ಗಿಳಿಯ ಮುಂದಿನ ಭಾಗ ಗ್ರೇ (ಬೂದು ಬಣ್ಣ)ದಿಂದ ಕೂಡಿದ್ದು, ಹಿಂದಿನ ಭಾಗ ಕೆಂಪು ಬಣ್ಣದಿಂದ ಕೂಡಿದೆ. ಈ ಗಿಳಿ ಯಾರಿಗಾದರೂ ಸಿಕ್ಕಿದಲ್ಲಿ 7204509687 ಈ ಸಂಖ್ಯೆಗೆ ಕರೆ ಮಾಡಿ. ಗಿಳಿಯನ್ನು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ತಕ್ಷಣ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನ್ಯಾಷನಲ್ ಹಿಲ್ ವ್ಯೂವ್ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು ಯಾರು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ