Kannada NewsKarnataka NewsLatest

ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಅಭಿವೃದ್ಧಿ ಯೋಜನೆ ತರಲು ಜನರ ಸಹಕಾರವೇ ಕಾರಣ – ಲಕ್ಷ್ಮಿ ಹೆಬ್ಬಾಳಕರ್​

ಜನರ ಅವಶ್ಯಕತೆ ಮತ್ತು ಕ್ಷೇತ್ರದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಡೀ ಕ್ಷೇತ್ರದಲ್ಲಿ ಆಗಬೇಕಿರುವ ಬಾಕಿ ಕೆಲಸಗಳ ಕುರಿತು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಸ್ಪಷ್ಟವಾದ ​ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ತನ್ಮೂಲಕ ಕ್ಷೇತ್ರಕ್ಕೆ ಹಲವು ಮಾದರಿ ಕೆಲಸಗಳನ್ನು ತರುವ ಯೋಚನೆ ಇದೆ

-ಲಕ್ಷ್ಮಿ ಹೆಬ್ಬಾಳಕರ್

 

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಬೆಳಗಾವಿ ಗ್ರಾಮೀಣ​ ಕ್ಷೇತ್ರದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು.​

ಈ ವೇಳೆ ಮಾತನಾಡಿದ ಅವರು, ಜನರ ಅವಶ್ಯಕತೆ ಮತ್ತು ಕ್ಷೇತ್ರದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಡೀ ಕ್ಷೇತ್ರದಲ್ಲಿ ಆಗಬೇಕಿರುವ ಬಾಕಿ ಕೆಲಸಗಳ ಕುರಿತು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಸ್ಪಷ್ಟವಾದ ​ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ತನ್ಮೂಲಕ ಕ್ಷೇತ್ರಕ್ಕೆ ಹಲವು ಮಾದರಿ ಕೆಲಸಗಳನ್ನು ತರುವ ಯೋಚನೆ ಇದೆ ಎಂದು ತಿಳಿಸಿದರು. 
​ಕ್ಷೇತ್ರದ ಜನರು ಸದಾ ನನ್ನೊಂದಿಗಿದ್ದು ಸಲಹೆ, ಸೂಚನೆ ನೀಡುತ್ತ ಬಂದಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೆ, ಇಡೀ ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಕೆಲಸ ನಿರ್ವಹಿಸಲು​ ನನ್ನಿಂದ ಸಾಧ್ಯವಾಗುತ್ತಿದೆ. ಮೊದಲ ಬಾರಿ ಶಾಸಕಿಯಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಇಲ್ಲಿಯ ಜನರ ಸಹಕಾರವೇ ಕಾರಣ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ಬೆಳವಟ್ಟಿ ಗ್ರಾಮದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಗಳನ್ನು ​ಹೆಬ್ಬಾಳಕರ್ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಎಸ್ ಡಿ ಎಮ್ ಸಿ ಯ ಪದಾಧಿಕಾರಿಗಳು, ಗುಂಡು ಸುತಾರ, ನಾರಾಯಣ ನಾಲವಡೆ, ಈರಪ್ಪ, ಚಟ್ನಿಕರ, ಸಾತೇರಿ ಪಾಟೀಲ, ಮಾರುತಿ ವಿಠ್ಠಲ ಪಾಟೀಲ, ಮೋನಪ್ಪ ಸುತಾರ, ಬಿ ಬಿ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಪಿ ಜುಟ್ನವರ, ಪಿತಾಂಬರ ಪಾಟೀಲ, ಡಿ ಎನ್ ದೇಸಾಯಿ, ಮನೋಹರ ಬೆಳಗಾಂವ್ಕರ್, ಗೌಡು ಪಾಟೀಲ, ಯಲ್ಲಪ್ಪ ನಾಯ್ಕ, ಪಿಡಿಓ ಅಧಿಕಾರಿ, ಮಹಾದೇವಿ ಮೇದಾರ, ನಿಶಾ ಚಂದಿಲಕರ್, ಬಾಬುರಾವ ಪಾಟೀಲ, ಮಧುಕರ್ ನಾಲವಡೆ, ಅರ್ಜುನ, ದೀಪಾ ನಾಲವಡೆ, ಸಾರಿಕಾ ಹೊಸೂರಕರ್, ಲಕ್ಷ್ಮೀ ಪಾಟೀಲ, ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
 ಮಾವಿನಕಟ್ಟಿ ಗ್ರಾಮದ ಶ್ರೀ ಪಾಂಡುರಂಗ ರುಕ್ಮಾಯಿ ಮಂದಿರದ ಸ್ಲ್ಯಾಬ್ ​ ಪೂಜೆ​ಯನ್ನು ಲಕ್ಷ್ಮಿ ಹೆಬ್ಬಾಳಕರ್ ನೆರವೇರಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಜನರು, ಮಂದಿರದ ಭಕ್ತಾಧಿಗಳು, ಟ್ರಸ್ಟ್ ಕಮೀಟಿಯವರು ಉಪಸ್ಥಿತರಿದ್ದರು.
ಕ್ಷೇತ್ರದ ಹೊನ್ನಿಹಾಳ ಗ್ರಾಮದ ಹನುಮಾನ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಪಂಚಾಯತ ರಾ​ಜ್​ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿ, ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​ ಭೂಮಿ ಪೂಜೆಯನ್ನು ​ನೆರವೇರಿಸಿದರು.​
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಹನುಮಾನ ನಗರದ ನಿವಾಸಿಗಳು, ಮಾಜಿ ಸೈನಿಕರು,ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button