Kannada NewsKarnataka NewsLatest

ಕೈಗಾರಿಕೆಗಳನ್ನು ಪ್ರಾರಂಭಿಸಲು ಅನುಮತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ದಿನಾಂಕ : ೪-೫-೨೦೨೦ ರಿಂದ ಆರೆಂಜ್ ಮತ್ತು ಹಸಿರು ವಲಯಗಳಲ್ಲಿ ಕಂಟೈನಮೆಂಟ ವಲಯಗಳನ್ನು ಹೊರತು ಪಡಿಸಿ ಉಳಿದಕಡೆ ಕೈಗಾರಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯು ಆರೆಂಜ್ ವಲಯದಲ್ಲಿ ಗುರುತಿಸಲಾಗಿದ್ದು ಕೇಂದ್ರ ಸರ್ಕಾರ ನೀಡಿದ ಆದೇಶದಂತೆ ಕೈಗಾರಿಕೆಗಳು ತಮ್ಮ ಚಟುವಟಿಕೆ ಪ್ರಾರಂಭಿಸುವ ಪೂರ್ವದಲ್ಲಿ Standard Operation Procedures ಗಳನ್ನು ಅಳವಡಿಕೊಳ್ಳಲೇಬೇಕು.

ಕೈಗಾರಿಕೆ ಘಟಕದವರು ಕೇಂದ್ರ ಸರ್ಕಾರದ SOP ಯ ಎಲ್ಲಾ ಅಂಶಗಳನ್ನು ಅಳವಡಿಸಿದ ನಂತರವೇ ಕೈಗಾರಿಕೆಯನ್ನು ಪ್ರಾರಂಭಿಸುವುದು.  ಕೈಗಾರಿಕಾ ಘಟಕದವರು ಈ ಬಗ್ಗೆ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರವನ್ನು ಭರ್ತಿ ಮಾಡಿ ತಮ್ಮ ಘಟಕದ ಆವರಣದಲ್ಲಿ ನೊಟೀಸ್ ಬೋರ್ಡಿಗೆ ಹಾಗೂ ಅದರ ಒಂದು ಪ್ರತಿಯನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಕಚೇರಿಗೆ ಇ-ಮೆಲ್-ಮುಖಾಂತರ jd.dicbelagavi@gmail.com ಸಲ್ಲಿಸಬೇಕಾಗುತ್ತದೆ.

ಕೈಗಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಒಬ್ಬರೆ ಪ್ರಯಾಣಿಸುವುದು ಹಾಗೂ ನಾಲ್ಕು ಚಕ್ರ ವಾಹನದಲ್ಲಿ ಮೂರು ಜನ ಪ್ರಯಾಣಿಸುವುದು.

Home add -Advt

ರಾತ್ರಿ ೭  ರಿಂದ ಬೆಳಗ್ಗೆ ೭ ಘಂಟವರೆಗೆ ಅನಾವಶ್ಯಕ ಸಂಚಾರ ನಿರ್ಭಂಧಿಸಲಾಗಿದ್ದು, ಈ ಸಮಯದಲ್ಲಿ ಕಂಪನಿಯ ಮಾಲೀಕರು ಮತ್ತು ಕಾರ್ಮಿಕರು ಸಂಚರಿಸುವಂತಿಲ್ಲ. ಆದರೆ, ಘಟಕದಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ.

ಕಾರ್ಮಿಕರು ಕಡ್ಡಾಯವಾಗಿ ಸಂಚರಿಸುವಾಗ ಹಾಗೂ ಕೆಲಸದ ಅವಧಿಯಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ಘಟಕದಲ್ಲಿ ನಿಯಮಿತವಾಗಿ ಸಾಬೂನಿಂದ ಕೈತೊಳೆಯುವುದು ಹಾಗೂ ಸ್ಯಾನಿಟೈಜರ್ ಬಳಸುವುದು.

ಕೈಗಾರಿಕಾ ಘಟಕದ ಮಾಲೀಕರು ಕಾರ್ಯ ಸ್ಥಳದಲ್ಲಿ ಹಾಗೂ ಶೌಚಾಲಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು.

ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅನೀರಿಕ್ಷತವಾಗಿ ಭೇಟಿ ಸಂದರ್ಭದಲ್ಲಿ ಮುಚ್ಚಳಿಕೆಯಲ್ಲಿ ನೀಡಿದ ಅಂಶಗಳನ್ನು ಪಾಲಿಸದೇ ಇರುವುದು ಕಂಡು ಬಂದಲ್ಲಿ ಘಟಕದ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗುವುದು.

ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಇವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದ್ದು, ಕೈಗಾರಿಕೆ ಪ್ರಾರಂಭಿಸಲು ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ಸಂಪರ್ಕಿಸಲು ಕೋರಲಾಗಿದೆ. ಮೊಬೈಲ್ : ೯೪೪೮೦೦೧೮೮೭

Related Articles

Back to top button