Kannada NewsKarnataka NewsLatest

ಬೆಳಗಾವಿ: 4.41 ಕೋಟಿ ಲೂಟಿ ಮಾಡಿ ಶಾರ್ಜಾಕ್ಕೆ ಹಾರಲು ಹೊರಟಿದ್ದ ಕ್ರಿಮಿನಲ್ ಗೆ ನ್ಯಾಯಾಂಗ ಬಂಧನ; 2.65 ಕೋಟಿ ವಶ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಲಸ ಮಾಡುತ್ತಿದ್ದ ಕಂಪನಿಗೆ ಮೋಸ ಮಾಡಿ 4.41 ಕೋಟಿ ರೂ.ಹಣ ಲಪಟಾಯಿಸಿ ಶಾರ್ಜಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಬೆಳಗಾವಿಗೆ ಕರೆ ತರಲಾಗಿದೆ.
12/03/2022 ರಂದು  ಪ್ರಕಾಶ ಸರ್ವಿ (ಸಾ: ಎಂ ಜಿ ಅಟೋಮೋಟೀವ್ ಬಸ್ & ಕೋಚ್ ಪ್ರಾ.ಅ ದೇಸೂರ )ಇವರು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಾಜರಾಗಿ  ತಮ್ಮ ಎಂ.ಜಿ ಗ್ರೂಪ್ ಪೈನಾನ್ಸಿಯಲ್ ಕಂಟ್ರೋಲರ್ ಹಾಗೂ ಅಸಿಸ್ಟಂಟ್ ಜನರಲ್ ಮ್ಯಾನೇಜರ ಭವ್ಯ ಹರೇನ್ ದೇಸಾಯಿ ಈತನು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಠಿಸಿ ಕಂಪನಿಯಿಂದ ರೂ 4,41,95,041/- ಗಳನ್ನು ಬ್ಯಾಂಕಿನ ಆರ್.ಟಿ.ಜಿ.ಎಸ್. ಮುಖಾಂತರ ತಾನೇ ಪಡೆದು ಕೊಡಬೇಕಾದ ಕಂಪನಿಗಳಿಗೆ ಹಣವನ್ನು ಕೊಡದೇ ಹಾಗೂ ಎಂ.ಜಿ.ಗ್ರೂಪ್ ಕಂಪನಿಗೆ ಹಣವನ್ನು ಮರಳಿಸದೇ, ತನ್ನ ಹಾಗೂ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು.
 ಈ ಕುರಿತು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ  ತನಿಖೆ ಕೈಗೊಳ್ಳಲಾಗಿತ್ತು.  ಪೊಲೀಸ ಆಯುಕ್ತರು  17-03-2022 ರಂದು ಆರೋಪಿತನ ಮೇಲೆ LOC ಹೊರಡಿಸಿದ್ದರು.
  24-03 -2022 ರಂದು ಮುಂಬೈ ಇಂಟರ ನ್ಯಾಷನಲ್ ಏರಪೋರ್ಟ ನಿಂದ ಶಾರ್ಜಾಕ್ಕೆ ಹೋಗಲು ಬಂದಾಗ ಏರಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ದಿನಾಂಕ 25-03-2022 ರಂದು
ಮುಂಬೈಯಿಂದ  ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬೆಳಗಾವಿಗೆ ಕರೆತರಲಾಗಿತ್ತು.
  ಭವ್ಯಾ ಹರೇನ ದೇಸಾಯಿ (ವಯಸ್ಸು 25 ವರ್ಷ ಸಾ|| ಮಹಡಿ ಮಸ್ಕತಿ ಮಹಲ್) ಯನ್ನು  25-03-2022 ರಂದು ನ್ಯಾಯಾಲಯಕ್ಕೆ ಹಾಜರಪಡಿಸಿ 10 ದಿವಸಗಳ ವರೆಗೆ ಪಿಸಿ ಕಸ್ಟಡಿ ಪಡೆದುಕೊಂಡು   ವಿಚಾರಣೆಗೆ ಒಳಪಡಿಸಿ ಮುಂಬೈಗೆ ಹೋಗಿ ತನಿಖೆ ಕೈಕೊಗೊಳ್ಳಲಾಗಿದೆ.
 ಆತನು ವರ್ಗಾಯಿಸಿಕೊಂಡ ವಿವಿಧ ಖಾತೆಗಳನ್ನು ಪ್ರೀಜ್ ಮಾಡುವುದರೊಂದಿಗೆ ಒಟ್ಟು ರೂ 2,65,00,000/- ಹಣವನ್ನು ಜಪ್ತ ಪಡಿಸಿಕೊಳ್ಳಲಾಗಿದೆ.
 ಪುನಃ 05-04-2022 ರಂದು  ನ್ಯಾಯಾಲಯಕ್ಕೆ ಹಾಜರಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆ ನಡೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button