
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬಿಜೆಪಿ ಸಂಸದರ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನೀವು ಬದಲಾಗಬೆಕು ಇಲ್ಲದಿದ್ದರೆ ಬದಲಾಯಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ ಅಧಿವೇಶನಕ್ಕೆ ಗೈರಾಗುವ ಸಂಸದರ ಕಿವಿ ಹಿಂಡಿದ್ದಾರೆ. ದಯವಿಟ್ಟು ಸಂಸತ್ ಅಧಿವೇಶನಕ್ಕೆ ಗೈರಾಗದೇ ಭಾಗವಹಿಸಿ. ಅಧಿವೇಶದಿಂದ ದೂರವಿರುವ ನಿಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬದಲಾವಣೆ ತರಬೇಕಾಗುತ್ತದೆ. ಮಗುವಿನಂತೆ ನಿರಂತರವಾಗಿ ಒತ್ತಡ ಹೇರುವುದು, ಮಕ್ಕಳಂತೆ ನಡೆಸಿಕೊಳ್ಳುವುದು ನನಗೆ ಒಳ್ಳೆಯದೆನಿಸಲ್ಲ ಎಂದು ಗರಂ ಆಗಿದ್ದಾರೆ.
ಸಂಸತ್ ಕಲಾಪಕ್ಕೆ ನಿಯಮಿತವಾಗಿ ಕಡ್ಡಾಯವಾಗಿ ಹಾಜರಿರಬೇಕು. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಯೋಜನೆಗಳು ಜನರನ್ನು ತಲುಪುವ ಕೆಲಸವಾಗಬೇಕು ಎಂದು ಹೇಳುವ ಮೂಲಕ ಸಂಸದರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಟ್ಟಿದ್ದಾರೆ.
ನಾವು ಮಾಡುತ್ತಿರುವುದರಲ್ಲಿ ತಪ್ಪೇನಿದೆ? – ಸಿಎಂ ಎದುರೇ ಪ್ರಶ್ನಿಸಿದ ಬಾಲಚಂದ್ರ ಜಾರಕಿಹೊಳಿ