Latest

*ಹೀರಾಬೆನ್ ಗುಣಗಾನ ಮಾಡಿದ ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ನಿಧನಕ್ಕೆ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ, ಪ್ರಧಾನಿ ಮೋದಿಯವರು ಹಾಗೂ ಪೂಜ್ಯ ತಾಯಿ ಹೀರಾಬೇನ್ ಅವರದು ಆದರ್ಶಮಯವಾದ ತಾಯಿ ಮಗನ ಸಂಬಂಧವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ತಾಯಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ನಮಗೆಲ್ಲರಿಗೂ ದು:ಖದ ಸಂಗತಿಯಾಗಿದೆ. ಪ್ರಧಾನಿ ಮೋದಿಯವರು ತೋರಿಸಿರುವ ಗೌರವ, ಪ್ರೀತಿ ಅನನ್ಯವಾದುದು. ಹೀರಾಬೇನ್ ತಾಯಿ ಮಗನಿಗೆ ತೋರಿಸಿರುವ ಪ್ರೀತಿ ವಾತ್ಸಲ್ಯವನ್ನು ನಾವೆಲ್ಲ ನೋಡಿದ್ದೇವೆ. ತಾಯಿ ಬಹಳ ಸರಳ, ಆದರೆ ಅಷ್ಟೇ ವಿಶೇಷ ಎಂದು ನರೇಂದ್ರ ಮೋದಿಯವರು ಹಲವು ಬಾರಿ ಹೇಳಿದ್ದಾರೆ. ಇಡೀ ದೇಶಕ್ಕೆ ಆದರ್ಶಮಯವಾದ ತಾಯಿ ಮತ್ತು ಮಗನ ಸಂಬಂಧವಾಗಿತ್ತು. ಆ ತಾಯಿ ಎಂದೂ ಕೂಡ ಮಗ ಯಾವುದೇ ಹುದ್ದೆಯಲ್ಲಿದ್ದರೂ, ಮಗನಾಗಿಯೇ ನೋಡಿದ್ದಾರೆಯೇ ಹೊರತು , ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ನೋಡಿರಲಿಲ್ಲ. ಇದು ಆ ತಾಯಿಯ ತಾಯ್ತನ ತೋರಿಸುತ್ತದೆ. ಅವರು ತನ್ನ ಕರ್ತವ್ಯವನ್ನು ಮಾಡಿ ನರೇಂದ್ರ ಮೋದಿಯವರಿಗೆ ಆದರ್ಶ, ತತ್ವನಿಷ್ಠೆ, ದೇಶಭಕ್ತಿಯನ್ನು ತುಂಬಿದ್ದಾರೆ. ಅವೆಲ್ಲ ಗುಣಗಳು ಮೋದಿಯವರಲ್ಲಿ ನೋಡುತ್ತಿದ್ದೇವೆ ಎಂದರು.

ಇಳಿವಯಸ್ಸಿನಲ್ಲಿಯೂ ಕರ್ತವ್ಯ ಪಾಲನೆ :

ಅವರು ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಊಟ ಮಾಡಿಸಿದ್ದಾರೆ. ಹಣವನ್ನೂ ನೀಡಿದ್ದಾರೆ. ತಾಯಿಯಾಗಿ ತನ್ನ ಕರ್ತವ್ಯವನ್ನು ಇಳಿ ವಯಸ್ಸಿನಲ್ಲಿಯೂ ಕೂಡ ಅವರು ಮರೆತಿರಲಿಲ್ಲ. ನರೇಂದ್ರ ಮೋದಿಯವರು ಅಷ್ಟೇ ಪ್ರೀತಿ ಪ್ರೇಮ ತೋರಿಸಿದದು, ತಾಯಿಯ ಭಾವನೆಗಳನ್ನು ಅರಿತು ನಡೆದುಕೊಂಡ ರೀತಿ ಆದರ್ಶವಾಗಿದೆ. ಅವರು ಎಲ್ಲ ಪ್ರಮುಖ ಸಂದರ್ಭದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ದೇಶಕ್ಕೆ ಇದು ಮಾದರಿ. ತಾಯಿ ಮಕ್ಕಳ ಸಂಬಂಧ,ಅಣ್ಣ ತಮ್ಮಂದಿರ ಸಂಬಂಧ, ಅಕ್ಕತಂಗಿಯರ ಸಂಬಂಧ ಈ ದೇಶದ ಪರಂಪರೆ ಹಾಗೂ ಸಂಸ್ಕೃತಿ. ಈ ಸಂಬಂಧಗಳಲ್ಲಿ ನಮ್ಮ ದೇಶದ ಐಕ್ಯತೆ ಇದೆ. ಹೀರಾಬೇನ್ ಅವರು ಆದರ್ಶ ತಾಯಿಯಾಗಿ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ಅಂತೆಯೇ ಒಬ್ಬ ಆದರ್ಶ ಮಗನಾಗಿ ನರೇಂದ್ರ ಮೋದಿಯವರು ದೇಶದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಕರ್ಮಯೋಗಿ :
ಮೋದಿಯವರು ಸಂತಾಪ ಸಂದೇಶದಲ್ಲಿ ತಾಯಿಯನ್ನು ಕರ್ಮಯೋಗಿ ಎಂದು ಬಣ್ಣಿಸಿದ್ದರು. ನರೇಂದ್ರ ಮೋದಿಯವರೂ ಕರ್ಮಯೋಗಿಯಾಗಿದ್ದಾರೆ. ತಾಯಿಯವರ ಕೊನೆಯ ಕರ್ಮಗಳನ್ನು ಮಗನಾಗಿ ಮಾಡುತ್ತಿದ್ದಾರೆ. ಅದರ ನಂತರ ಯಥಾಪ್ರಕಾರ ತಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಗವಹಿಸಲಿದ್ದಾರೆ. ಇದು ನರೇಂದ್ರ ಮೋದಿಯವರ ಕರ್ತವ್ಯ ಪ್ರಜ್ಞೆಯನ್ನು ಬಿಂಬಿಸುತ್ತದೆ. ತಾಯಿ ಆತ್ಮಕ್ಕೆ ಭಗವಂತ ಶಾಂತಿ ದೊರಕಲಿ. ಈ ದು:ಖವನ್ನು ಭರಿಸುವ ಶಕ್ತಿಯನ್ನು ಪ್ರಧಾನಿ ಮೋದಿ ಹಾಗೂ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

 

*ಪಂಚಭೂತಗಳಲ್ಲಿ ಲೀನರಾದ ಹೀರಾಬೆನ್*

https://pragati.taskdun.com/heerabencrematedpm-modi-gives-shoulder-carries-mortal-remains-of-mother/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button