BusinessLatestNational

*ಯುದ್ಧದ ಎಫೆಕ್ಟ್: ಷೇರು ಮಾರುಕಟ್ಟೆ ಭಾರಿ ಕುಸಿತ*

ಪ್ರಗತಿವಾಹಿನಿ ಸುದ್ದಿ: ಇರಾನ್, ಇಸ್ರೇಲ್-ಅಮೇರಿಕಾ ನಡುವಿನ ಯುದ್ಧ ಮುಂದುವರೆದಿದ್ದು, ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿರುತ್ತಿದೆ. ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ.

ಸೆನ್ಸೆಕ್ಸ್ 1700 ಪಾಯಿಂಟ್ ಹಾಗೂ ನಿಫ್ಟಿ 412 ಪಾಯಿಂಟ್ ಗಳ ಕುಸಿತ ಕಂಡಿದೆ. ಸ್ಮವಾರ ಮಾರುಕಟ್ಟೆ ಓಪನ್ ಆಗುತ್ತಿದ್ದಂತೆಯೇ ಷೇರುಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಶುರುವಾಗಿದ್ದು, ಭಾರಿ ಕುಸಿತವಾಗಿದೆ.

Related Articles
Home add -Advt

ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 33 ಪೈಸೆ ಕುಸಿದು 93.86ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ.

ಒಂದೆಡೆ ಯುದ್ಧ, ಮತ್ತೊಂದೆಡೆ ಕಚ್ಚಾ ತೈಲ, ಗ್ಯಾಸ್ ಸಿಲಿಂಡರ್ ಅಭಾವ ಹಿನ್ನೆಲೆಯಲ್ಲಿ ದೇಶಿಯ ಹೂಡಿಕೆದರರಿಗೂ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ ಷೇರುಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ ಎನ್ನಲಾಗಿದೆ.

Related Articles

Back to top button