Kannada NewsLatestNational

*ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ; ಇಂದಿನಿಂದ ಉಪವಾಸ ವೃತ ಕೈಗೊಂಡ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜನವರಿ.22ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಉಪವಾಸ ವೃತ ಕೈಗೊಂಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶ ವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಡಿಯೋ ಸಂದೇಶ ನೀಡಿದ್ದು, ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಇದೆ. ಈ ಸುಸಂದರ್ಭಕ್ಕೆ ನಾನೂ ಕೂಡ ಸಾಕ್ಷಿ ಆಗುತ್ತಿರುವುದು ನನ್ನ ಅದೃಷ್ಟ. ಈ ಸಮರ್ಪಣೆಯ ಸಂದರ್ಭದಲ್ಲಿ ಭಗವಂತ ದೇಶದ ಎಲ್ಲಾ ಜನರನ್ನು ಪ್ರತಿನಿಧಿಸಲು ನನ್ನನ್ನು ಸಾಧನವನ್ನಾಗಿ ಮಾಡಿದ್ದಾನೆ. ಇದು ನನ್ನ ಸೌಭಾಗ್ಯ. ಈ ಅದೃಷ್ಟಕ್ಕೆ ನಾನು ಭಾವುಕನಾಗಿದ್ದೇನೆ.

ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಂತಹ ಒಂದು ಕ್ಷಣವನ್ನು ಅನುಭವಿಸುತ್ತಿದ್ದೇನೆ. ಭಕ್ತಿಯ ವಿಭಿನ್ನ ಭಾವನೆ ಅನುಭವಿಸುತ್ತಿದ್ದೇನೆ. ಅಭಿವ್ಯಕ್ತಿಗೆ ಅವಕಾಶವಲ್ಲ ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಹಲವು ತಲೆಮಾರುಗಳ ಸಂಕಲ್ಪ, ಕನಸು ಹಾಗೂ ಅದನ್ನು ಸಾಧಿಸಿದ ಸಂದರ್ಭದಲ್ಲಿರುವುದು ನನ್ನ ಸೌಭಾಗ್ಯ. ಇದೊಂದು ದೊಡ್ಡ ಜವಾಬ್ದಾರಿ. ಯಾಗ ಮತ್ತು ದೇವರ ಆರಾಧನೆ ಬಗ್ಗೆ ಶಾಸ್ತ್ರಗಳು ಹೇಳುವಂತೆ ನಮ್ಮಲ್ಲಿಯೂ ಪರಮಾತ್ಮನ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಆಧ್ಯಾತ್ಮಿಕ ಯಾತ್ರೆಯ ಮಹಾಪುರುಇಷರಿಂದ ನನಗೆ ದೊರೆತ ಮಾರ್ಗದರ್ಶನದಂತೆ ನಾನು ಇಂದಿನಿಂದ 11 ದಿನಗಳ ಕಾಲ ವಿಶೇಷ ವೃತ, ಆಚರಣೆ ಆರಂಭಿಸಿದ್ದೇನೆ. ಈ ಪುಣ್ಯ ಸಂದರ್ಭದಲ್ಲಿ ದೇವರ ಪಾದಗಳಲ್ಲಿ ಪ್ರಾರ್ಥಿಸುತ್ತೇನೆ. ನನ್ನಿಂದ ಯಾವುದೇ ಕೊರತೆಯಾಗದಂತೆ ಆಶಿರ್ವದಿಸುವಂತೆ ಜನರಲ್ಲಿಯೂ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.


Home add -Advt

Related Articles

Back to top button