Uncategorized

*ಕಾಂಗ್ರೆಸ್ ಗೆ ಹನುಮನನ್ನು ಕಂಡರೆ ಆಗುತ್ತಿಲ್ಲ; ಹನುಮ ಭಕ್ತರಿಗೆ ತೊಂದರೆ ಕೊಡುತ್ತಿದೆ; ಪ್ರಧಾನಿ ಮೋದಿ ಕಿಡಿ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಕಾಂಗ್ರೆಸ್ ಗೆ ಹನುಮಂತನನ್ನು ಕಂಡರೂ ಆಗಲ್ಲ, ಹನುಮನನ್ನು ಕೂಡಿ ಹಾಕಲು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ವಿಜಯನಗರ ಸಾಮ್ರಾಜ್ಯ, ಶ್ರೀಕೃಷ್ಣದೇವರಾಯರನ್ನು ಸ್ಮರಿಸಿದರು. ವಿಜಯನಗರದ ಇತಿಹಾಸ ಭಾರತದ ಗೌರವ. ಶ್ರೀಕೃಷ್ಣದೇವರಾಯರು ಸಾಕಷ್ಟು ಅಭಿವೃದ್ಧಿಗೆ ಹೆಸರಾಗಿದ್ದರು. ಜಗತ್ತಿನಲ್ಲಿಯೇ ಕರ್ನಾಟಕದ ಹೆಸರು ಮಿಂಚುವಂತೆ ಮಾಡಿದ್ದರು. ವಿಜಯನಗರ ಸಾಮ್ರಾಜ್ಯ ಪ್ರೇರಣೆಯಾಗಿದೆ ಎಂದು ಹೇಳಿದರು.

ಹಂಪಿ ಶ್ರೀ ವಿರೂಪಾಕ್ಷ ಸ್ವಾಮಿ, ಉಗ್ರನರಸಿಂಹ, ಹುಲಿಗೆಮ್ಮ ದೇವಿಗೆ ನಮಸ್ಕಾರ. ಹನುಮ ಜನ್ಮಭೂಮಿಗೆ ಬಂದಿದ್ದು ನನ್ನ ಪುಣ್ಯ. ಇಡೀ ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವು ಆಂಜನೇಯನ ಆಶಿರ್ವಾದ ಪಡೆಯಲು ಬಂದಿದ್ದೇವೆ. ಕಾಂಗ್ರೆಸ್ ಗೆ ಹನುಮನನ್ನು ಕಂಡರೂ ಆಗಲ್ಲ. ಹನುಮನ ಭಕ್ತರಿಗೆ ತೊಂದರೆ ಕೊಡುತ್ತಿದೆ ಎಂದು ಗುಡುಗಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಘೋಷಿಸಿರುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ನವರು ಶ್ರೀರಾಮಚಂದ್ರನನ್ನು ಬಂಧಿಸಿದ್ದರು. ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ. ಕಾಂಗ್ರೆಸ್ ನವರಿಗೆ ಹನುಮನನ್ನು ಕಂಡರೆ ಆಗುತ್ತಿಲ್ಲ ಎಂದು ಕಿಡಿಕಾರಿದರು.

Home add -Advt
https://pragati.taskdun.com/d-k-shivakumarhelicopter-emergency-landing/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button