Latest

ಶಿರಸಿ: ವಿದ್ಯುತ್ ಹರಿದು ಮಹಿಳೆ ಸಾವು

ಪ್ರಗತಿವಾಹಿನಿ ಸುದ್ದಿ;ಕಾರವಾರ: ಶಿರಸಿ ತಾಲೂಕಿನ ಬಾಳೆಗದ್ದೆ ಬಳಿಯ ಎಂಟಗದ್ದೆಯಲ್ಲಿ ಕೋಳಿ ಸಂಭಾವ್ಯ ಫಾರಂನ ಬೇಲಿಗೆ ಕರೆಂಟ್ ಹರಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ ಕೊಡಿಯಾ ಬಂಧಿತ ಆರೋಪಿ. ಈತ ಕಳೆದ ಸೆ. 11ರಂದು ಎಂಟಗದ್ದೆಯಲ್ಲಿರುವ ತನ್ನ ಕೋಳಿ ಫಾರ್ಮ್ ಎದುರಿಗೆ ತಂತಿ ಬೇಲಿಯನ್ನು ಹಾಕಿ ಅದಕ್ಕೆ ಕರೆಂಟನ್ನು ಕೊಟ್ಟಿದ್ದ‌ ಕೋಳಿ ಫಾರ್ಮ್ ಎದುರಿನ ಕಾಲುದಾರಿಯಲ್ಲಿ ದನಗಳನ್ನು ಹೊಡೆದುಕೊಂಡು ನಡೆದುಕೊಂಡು ಹೊರಟಿದ್ದ ಸರಸ್ವತಿ ಕೊಡಿಯಾ ಇವರಿಗೆ ರಮೇಶ್ ಕೊಡಿಯಾ ಹಾಕಿದ್ದ ವಿದ್ಯುತ್ ತಂತಿ ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿತ ರಮೇಶ ಕೊಡಿಯಾ ಮೇಲೆ ಪ್ರಕರಣ ದಾಖಲಾಗಿತ್ತು . ಆರೋಪಿ ರಮೇಶ ಕೊಡಿಯಾ ತಲೆ ಮರೆಸಿಕೊಂಡಿದ್ದ.

ಡಿವೈಎಸ್ ಪಿ ರವಿ. ಡಿ .ನಾಯ್ಕ್, ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾನುವಾರ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಅಥಣಿ ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರ

Home add -Advt

https://pragati.taskdun.com/politics/aathaniarogya-shibirajournalistlakshmana-savadi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button