Kannada NewsKarnataka NewsLatest

ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪೊಲೀಸ್- ಬಸ್ ಕಂಡಕ್ಟರ್ ಮಾರಾಮಾರಿ (ವಿಡೀಯೋ ನೋಡಿ)

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಚನ್ನಮ್ಮ ವೃತ್ತದಲ್ಲಿ  ಟ್ರಾಫಿಕ್ ಪೊಲೀಸ್ ಮತ್ತು ಸರ್ಕಾರಿ ಬಸ್ ನಿರ್ವಾಹಕನ‌ ಮಧ್ಯೆ ಮಾರಾಮಾರಿ ನಡೆದಿದೆ.

ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದ‌ನ್ನು‌ ಪ್ರಶ್ನಿಸಿದ ಟ್ರಾಫಿಕ್ ಮುಖ್ಯಪೇದೆ ಮತ್ತು ನಿರ್ವಾಹಕನ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾ ಮಾರಿ ನಡೆದಿದೆ.

ನಿರ್ವಾಹಕ ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿ ಬಸ್ ನಿಲ್ದಾಣಕ್ಕೆ ಬಸ್ ತೆರಳುತ್ತಿತ್ತು.  ಈ ವೇಳೆ ಬಸ್ ನಿಲ್ಲಿಸುವ ವಿಚಾರಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಚನ್ನಮ್ಮ ವೃತ್ತದಲ್ಲಿ ಸಿಗ್ನಲ್ ಮಧ್ಯೆ ಚಾಲಕ ನಗರ ಸಾರಿಗೆ ಬಸ್ ನಿಲ್ಲಿಸಿದ್ದ. ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಚಾಲಕ, ನಿರ್ವಾಹಕರನ್ನು ಸಂಚಾರಿ ಪೊಲೀಸರು ತರಾಟೆಗೆ ತೆಗೆದುಕೊಂಡರು. ಟ್ರಾಫಿಕ್ ಮುಖ್ಯಪೇದೆಗೆ ಅವಾಚ್ಯ ಶಬ್ದಗಳಿಂದ ನಿರ್ವಾಹಕ ನಿಂದಿಸಿದ್ದಾನೆ.
ಈ ವೇಳೆ ಆಕ್ರೋಶಗೊಂಡು ನಿರ್ವಾಹಕನಿಗೆ ಮುಖ್ಯಪೇದೆಯಿಂದ ಕಪಾಳಮೋಕ್ಷವಾಗಿದೆ ಎನ್ನಲಾಗಿದೆ. ನಂತರ ನಿರ್ವಾಹಕ ಕೂಡ ಮುಖ್ಯಪೇದೆಯ ಕಪಾಳಕ್ಕೆ ಬಾರಿಸಿದ್ದಾನೆ.
 ನಂತರ ಇತರ ಪೊಲೀಸರು ಮತ್ತು ಸಾರ್ವಜನಿಕರು ಗಲಾಟೆ ತಡೆದು ಕಳಿಸಿದ್ದಾರೆ.

Related Articles

Back to top button