
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಟೇಬಲ್ ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.
ವಿದ್ಯಾರಣ್ಯಪುರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಹೊನ್ನಪ್ಪ ಬಂಧಿತ ಆರೋಪಿ. ಹೊನ್ನಪ್ಪ, ಕೆಲ ಹುಡುಗರಿಗೆ ತನ್ನ ಮನೆಯಲ್ಲಿಯೇ ಆಶ್ರಯ ನೀಡಿ ಅವರಿಂದ ಬೈಕ್ ಕಳ್ಳತನ ಮಾಡಿಸುತ್ತಿದ್ದ. ಅಲ್ಲದೇ ಕದ್ದ ಬೈಕ್ ಗೆ ದಾಖಲೆ ಸೃಷ್ಟಿಸಿ ಮಾರಾಟ ಮಾಡಿಸುತ್ತಿದ್ದ.
ಪ್ರಕರಣ ಸಂಬಂಧ ಇದೀಗ ಕಾನ್ಸ್ ಟೇಬಲ್ ಹೊನ್ನಪ್ಪ ಹಾಗೂ ಬೈಕ್ ಕಳ್ಳರಾದ ರಮೇಶ್, ರವಿ ಹಾಗೂ ಇನ್ನಿಬ್ಬರು ಅಪ್ರಾಪ್ತರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ
ಜೆಡಿಎಸ್ ನಾಯಕನ ಪುತ್ರ ಆತ್ಮಹತ್ಯೆಗೆ ಶರಣು