
ಪ್ರಗತಿವಾಹಿನಿ ಸುದ್ದಿ: ಅಕ್ರಮವಾಗಿ ಕಿರುಸಾಲ, ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದರು.
ವಿಜಯಪುರ ಜಿಲ್ಲೆಯ 25 ಠಾಣಾ ವ್ಯಾಪ್ತಿಯಲ್ಲಿ 104 ವ್ಯಕ್ತಿಗಳ ಮನೆ, ಕಚೇರಿಗಳ ಮೇಲೆ ವಿವಿಧ ಪೊಲೀಸರ ತಂಡಗಳಿಂದ ರೇಡ್ ಮಾಡಲಾಗಿದೆ. ಈ ವೇಳೆ 37 ಜನರ ಬಳಿ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ಖಾಲಿ ಬಾಂಡ್ ಪೇಪರ್ಸ್, ಚೆಕ್, ಕೈಗಡ ಪತ್ರ, ಪಹಣಿ ಪತ್ರಗಳು, ಬ್ಯಾಂಕ್ ಪಾಸ್‌ಬುಕ್ಸ್, ನಗದು, ಅಗ್ರಿಮೆಂಟ್ ಪೇಪರ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.
ರೂ.62.29 ಲಕ್ಷ ನಗದು, 55 ಗ್ರಾಮ ಚಿನ್ನಾಭರಣ, 489 ಖಾಲಿ ಬಾಂಡ್ ಸಹ ಪತ್ತೆಯಾಗಿವೆ. ಇದಲ್ಲದೇ, 285 ಖಾಲಿ ಚೆಕ್, 95 ಪಾಸ್‌ಬುಕ್‌ಗಳು ಸೇರಿದಂತೆ 245 ಇತರೆ ದಾಖಲೆಗಳನ್ನು ಪೊಲೀಸರು ಸೀಜ್ ಮಾಡಲಾಗಿದೆ. ಇನ್ನು ಜಪ್ತಿ ಮಾಡಲಾದ ದಾಖಲೆಗಳನ್ನು ಡಿಸಿ ಕಚೇರಿಗೆ ಸಲ್ಲಿಕೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ