
ಸೈಕಲ್ ಟ್ರ್ಯಾಕ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಅಜಮ ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆದ ಸ್ಮಾರ್ಟ ಸಿಟಿ ಯೋಜನೆ ಅಡಿಯಲ್ಲಿ ಸೈಕಲ್ ಟ್ರ್ಯಾಕ್ ಕಾಮಗಾರಿಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಸುಮಾರು ೧೫ ಕೋಟಿ ರೂಪಾಯಿ ಅನುದಾನದಲ್ಲಿ ಇಂಡಾಲ್ ಕ್ರಾಸ್ ನಿಂದ ಹನುಮಾನ ನಗರ ವೃತ್ತದವರೆಗೆ ಪುಟ್ ಪಾತ್ ಹಾಗೂ ಸೈಕಲ್ ಟ್ರ್ಯಾಕ್ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ೧೫ ಕೋಟಿ ಅನುದಾನದಡಿಯಲ್ಲಿ ಬಾಕ್ಸೈಟ್ ರೋಡ್‌ನ ಎರಡೂ ಬದಿಯಲ್ಲಿ ಸೈಕಲ್ ಟ್ರ್ಯಾಕ್ ಮತ್ತು ಪುಟ್ ಪಾತ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಜನರಿಗೆ ಅನುಕೂಲ ಆಗಲೆಂದು ಸ್ಮಾರ್ಟ್ ಟ್ರ್ಯಾಕ್ ನಿರ್ಮಾಣ ಮಾಡಲಿದ್ದೇವೆ. ಆದ್ದರಿಂದ ಸಾರ್ವಜನಿಕರು ಅದಕ್ಕೆ ಸಹಕಾರ ನೀಡಬೇಕು ಹಾಗೂ ಕಾಮಗಾರಿಯಲ್ಲಿ ತಕರಾರು ಕಂಡು ಬಂದಲ್ಲಿ ನಮಗೆ ತಿಳಿಸಬೇಕು. ನಗರದ ಎ.ಪಿ.ಎಮ್.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಆ ರಸ್ತೆ ಕಾಮಗಾರಿಯನ್ನು ಸಹ ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು. ಅದೇ ರೀತಿ ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಬರುವ ಎಲ್ಲ ಕಾಮಗಾರಿಗಳಿಗೆ ಆದಷ್ಟು ಬೇಗನೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ತದನಂತರ ಮಾತನಾಡಿದ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಚಿಕ್ಕನಗೌಡರ, ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿ ಸ್ಮಾರ್ಟ್ ಟ್ರ್ಯಾಕ್ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಕ್ಕಾಗಿ ಅವರಿಗೆ ಎಲ್ಲರೂ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ನಗರ ಸೇವಕ ಮೋಹನ ಬೆಳಗುಂದಕರ, ವಿಜಯ ಕೊಡಗನವರ, ಬಿರಾದರ, ಪ್ರವೀಣ ಪಾಟೀಲ, ಸ್ಮಾರ್ಟ ಸಿಟಿ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ