
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕನಿಂದ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಕ್ರೈಂ ಬ್ರ್ಯಾಂಚ್ ಪೊಲೀಸರು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಸಾಸೂನ್ ಸರ್ಕಾರಿ ಆಸ್ಪತ್ರೆಯ ಡಾ.ಶ್ರೀಹರಿ ಹಾರ್ಲರ್ ಹಾಗೂ ಡಾ.ಅಜಯ್ ತಾವ್ರೆ ಬಂಧಿತರು. ಇಬ್ಬರು ವೈದ್ಯರು ಆರೋಪಿ ಬಾಲಕ ವೇದಾಂತ್ ಅಗರ್ವಾಲ್ ನ ರಕ್ತದ ಮಾದರಿ ವರದಿ ತಿರುಚಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಮೇ 19ರಂದು 17 ವರ್ಷದ ವೇದಾಂತ್ ಅಗರ್ವಾಲ್, ಐಷಾರಾಮಿ ಪೋರ್ಶೆ ಕಾರು ಓಡಿಸುತ್ತಿದ್ದ. ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಬೈಕ್ ಗೆ ಗುದ್ದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಾಪರಾಧಿ ಬಾಲಕನನ್ನು ಬಂಧಿಸಿದ್ದರು. ಷರತ್ತು ಬದ್ಧ ಜಾಮೀನು ಮೇಲೆ ಆತನನ್ನು ಬಿಡುಇಗಡೆ ಮಡ್ಲಾಗಿತ್ತು. ಬಳಿಕ ಆತನ ತಂದೆ ವಿಶಾಲ್ ಅಗರ್ವಾಲ್ ನನ್ನು ಬಂಧಿಸಿದ್ದರು. ಪೊಲೀಸ್ ನಡೆಗೆ ತೀವ್ರ ಕಹ್ಂದನೆ ವ್ಯಕ್ತವಾಗಿತ್ತು. ಬಳಿಕ ಮತ್ತೆ ಬಾಲಾಪರದಹಿಯನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ಆತ ತಾನು ಮದ್ಯಸೇವಿಸಿ ಕಾರು ಚಲಾಯಿಸಿರಲಿಲ್ಲ ಎಂದು ವಾದಿಸಿದ್ದ. ವೇದಾಂತ್ ಅಗರ್ವಾಲ್ ನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆತನ ಕುಟುಂಬದವರ ಹಣದ ಆಮಿಷದ ಮೇರೆಗೆ ವೈದ್ಯಬ್ಬರು ರಕ್ತದ ವರದಿ ತಿರುಚಿದ್ದರು ಎನ್ನಲಾಗಿದೆ. ಅಪಘಾತಕ್ಕೂ ಮುನ್ನ ವೇದಾಂತ್ ತನ್ನ ಸ್ನೇಹಿತರ ಜೊತೆ ಸೇರಿ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಕ್ತದ ಮಾದರಿ ವರದಿ ಬಗ್ಗೆ ಅನುಮಾನಗೊಂಡ ಪೊಲೀಸರು ವೈದ್ಯರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ