Kannada NewsKarnataka News

ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ

ಇಂದು ಸಂಜೆಯೊಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ

ಪ್ರಗತಿವಾಹಿ ಸುದ್ದಿ, ಬೆಳಗಾವಿ –

ಬಹುನಿರೀಕ್ಷಿತ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಚಿವಸಂಪುಟದಲ್ಲಿ ಹಲವು ಅಚ್ಛರಿ ಕಾಣಿಸಿಕೊಂಡಿದ್ದು, ಅನೇಕ ಹಿರಿಯರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಕೆಲವು ಅನಿರೀಕ್ಷಿತ ಸೇರ್ಪಡೆಯೂ ಆಗಿದೆ. ಅನೇಕ ಶಾಸಕರು ಅಲ್ಲಲ್ಲಿ ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. ಅನೇಕ ಪ್ರಮುಖರು ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರನ್ನೆಲ್ಲ ಸಮಾಧಾನಪಡಿಸುವ ಹೊಣೆಯೂ ಯಡಿಯೂರಪ್ಪ ಹೆಗಲಿಗಿದೆ.

ಇದನ್ನೂ ಓದಿ – ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!

ಇನ್ನು ನೂತನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸುವ ಹೊಣೆಯೂ ಇದೆ.

ಈಗಿನ ಮಾಹಿತಿ ಪ್ರಕಾರ ಕೆ.ಎಸ್.ಈಶ್ವರಪ್ಪ ಅವರಿಗೆ ಗೃಹ ಖಾತೆ, ಆರ್.ಅಶೋಕ ಅವರಿಗೆ ಸಾರಿಗೆ, ಜಗದೀಶ್ ಶೆಟ್ಟರ್ ಅವರಿಗೆ ಕಂದಾಯ, ಮಾಧುಸ್ವಾಮಿ ಅವರಿಗೆ ಸಂಸದೀಯ ವ್ಯವಹಾರ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ, ಸಿ.ಟಿ.ರವಿ ಅವರಿಗೆ ಅರಣ್ಯ ಅಥವಾ ಪ್ರಾಥಮಿಕ ಶಿಕ್ಷಣ, ಸುರೇಶ ಕುಮಾರ ಅವರಿಗೆ ಕಾನೂನು, ಉನ್ನತ ಶಿಕ್ಷಣ ಖಾತೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ – ಇನ್ನು ಕೆಲವೇ ಕ್ಷಣದಲ್ಲಿ ನೂತನ ಸಚಿವರ ಪ್ರಮಾಣ ವಚನ

ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಕುಟುಂಬ ಕಲ್ಯಾಣ, ಲಕ್ಷ್ಮಣ ಸವದಿಗೆ ಸಹಕಾರ, ಬಸವರಾಜ ಬೊಮ್ಮಾಯಿಗೆ ಜಲಸಂಪನ್ಮೂಲ ಖಾತೆ, ಶ್ರೀರಾಮುಲುಗೆ ಸಮಾಜಕಲ್ಯಾಣ ಖಾತೆ ನೀಡಬಹುದು. ಸಿ.ಸಿ.ಪಾಟೀಲ, ವಿ.ಸೋಮಣ್ಣ, ಅಶ್ವತ್ಥ ನಾರಾಯಣ, ಪ್ರಭು ಚವ್ಹಾಣ, ನಾಗೇಶ ಅವರಿಗೆ ಯಾವ ಖಾತೆ ಹಂಚಬೇಕು ಎನ್ನುವ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ.

ಸಚಿವರ ಸಂಖ್ಯೆ ಕಡಿಮೆ ಇರುವುದರಿಂದ ಕೆಲವರಿಗೆ ಎರಡೆರಡು ಖಾತೆ ಹಂಚಿಕೆ ಅನಿವಾರ್ಯ.

ಇಂದು ಸಂಜೆಯೊಳಗೆ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಇದೇನಿದು, ಮಧ್ಯರಾತ್ರಿ ಹೊರಬಿದ್ದ ಅಚ್ಛರಿಯ ಪಟ್ಟಿ?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button