Kannada NewsKarnataka News

*ಹುಬ್ಬಳ್ಳಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪುಡಿ ರೌಡಿಗಳು*

ಪ್ರಗತಿವಾಹಿನಿ ಸುದ್ದಿ: ಹಳೆಯ ವೈಷಮ್ಯದ ಹಿನ್ನೆಲೆ ರೌಡಿ ಶೀಟರ್ ಡೇವಿಡ್ ಯಮಾರ್ಥಿ ಮೇಲೆ ದಾವೂದ್ ಗ್ಯಾಂಗ್ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ತಡರಾತ್ರಿ ನಡೆದಿದೆ. 

Related Articles
Home add -Advt

ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆಯಿಂದ ಹುಬ್ಬಳ್ಳಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ ಆದರೆ ಈ ಮಧ್ಯೆ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಹುಬ್ಬಳ್ಳಿಯ ಮಂಟೂರ್ ರಸ್ತೆಯ ರೌಡಿ ಡೇವಿಡ್ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಹಿಂದೆ ಹುಬ್ಬಳ್ಳಿಯ ಸಬ್ ಜೈಲಿನಲ್ಲಿ ಜಗಳವಾಡಿಕೊಂಡಿದ್ದರು.‌ 8-10 ಜನ ಗುಂಪಿನಿಂದ ಡೇವಿಡ್ ಮೇಲೆ ಹಲ್ಲೆ ಮಾಡಿದ ಪರಿಣಾಮ ಡೇವಿಡ್ ತೆಲೆಗೆ ಗಂಭೀರವಾದ ಗಾಯವಾಗಿದೆ.‌ 

ಡೇವಿಡ್ ನನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವೇಳೆ ಆಸ್ಪತ್ರೆಯಲ್ಲೆ ಡೇವಿಡ್ ಪುಂಡಾಟ ನಡೆಸಿದ್ದಾನೆ. ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡು, ಆಸ್ಪತ್ರೆಯ ಗಾಜು, ಪೀಠೋಪಕರಣ ಧ್ವಂಸ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಪುಂಡಾಟ ನಿಯಂತ್ರಿಸಲು ಮುಂದಾದ ಪೊಲೀಸರಿಗೆ, ಪುಡಿ ರೌಡಿ ಡೇವಿಡ್ ಆವಾಜ್ ಹಾಕಿದ್ದಾನೆ. ಇನ್ನು ರೌಡಿ ಪುಂಡಾಟಿಕೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಹೈರಾಣಾಗಿದ್ದಾರೆ.‌

Related Articles

Back to top button