ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಸ್ಥರಿಗೆ ನಿಷೇಧ ಹೇರಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಸವದತ್ತಿ ಯಲ್ಲಮ್ಮನ ಜಾತ್ರೆ, ಪಂತಬಾಳೇಕುಂದ್ರಿ ಜಾತ್ರೆ, ಹುಕ್ಕೇರಿ ಹೊಳೆಮ್ಮದೇವಿ ಜಾತ್ರೆ ಸೇರಿದಂತೆ ಎಲ್ಲ ಕಡೆಗೂ ಮುಸ್ಲೀಂ ವರ್ತಕರು ನಡೆಸುವ ವ್ಯಾಪಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು ಎಂದರು.
ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲ ಪ್ರಮುಖ ದೇವಸ್ಥಾನಗಳ ಆವರಣದಲ್ಲಿನ ಅಂಗಡಿಗಳ ಪಟ್ಟಿ ಮಾಡುತ್ತೇವೆ. ಅದನ್ನು ಹಿಂದೂಗಳಿಗೆ ಹಂಚುತ್ತೇವೆ. ಮುಸ್ಲೀಂ ಅಂಗಡಿಗಳಿಗೆ ಹೋಗದಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಉಚಗಾವಿ ಮಳೆಕುರ್ಣಿದೇವಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನೂರಾರು ಕುರಿಗಳನ್ನು ಬಲಿ ಕೊಡಲಾಗುತ್ತದೆ. ಅಲ್ಲಿ ಮುಸ್ಲೀಂರು ಹಲಾಲಗಾಗಿ ಬರುತ್ತಾರೆ. ಅದನ್ನೂ ನಿಲ್ಲಿಸುತೇವೆ ಎಂದು ಹೇಳಿದ್ದಾರೆ.
6ನೇ ತರಗತಿವರೆಗಷ್ಟೇ ವಿದ್ಯಾರ್ಥಿನಿಯರಿಗೆ ಅವಕಾಶ; ಶಾಕ್ ನೀಡಿದ ತಾಲಿಬಾನ್ ಸರ್ಕಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ