Belagavi NewsBelgaum NewsKannada NewsKarnataka NewsLatest
*ಮೇಯರ್ ಆಗಿ ಪ್ರೀತಿ ಕಾಮಕರ್, ಉಪಮೇಯರ್ ಆಗಿ ಹನುಮಂತ ಕೊಂಗಾಲಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ಆಯ್ಕೆ ಆಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಆಗಿ ನೇಕಾರ ಸಮಾಜದ ಪ್ರೀತಿ ಕಾಮಕರ್ ಮತ್ತು ಉಪ ಮೇಯರ್ ಆಗಿ ಲಿಂಗಾಯತ ಸಮಾಜದ ಹನುಮಂತ ಕೊಂಗಾಲಿ ಆಯ್ಕೆ ಆಗಿದ್ದಾರೆ.
ಕೋರ ಕಮಿಟಿ ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಗಳಿಗೆ ಹೆಸರು ಅಂತಿಮ ಮಾಡಲಾಗಿದೆ.
ಈ ವೇಳೆ ಶಾಸಕ ಅಭಯ ಪಾಟೀಲ್ ಮಾತನಾಡಿ, ಮೇಯರ್ ಆಗಿ ಪ್ರೀತಿ ಕಾಮಕರ್, ಹನುಮಂತ ಕೊಂಗಾಲಿ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ. ನಾಲ್ಕನೇ ಅವಧಿಗೆ ಮಹಾಪೌರ, ಉಪಮಹಾಪೌರ ಆಯ್ಕೆ ಮಾಡಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರ ಸಮಾಜಕ್ಕೆ ಮೇಯರ್ ಸ್ಥಾನ ನೀಡಲಾಗಿದೆ ಎಂದರು.




