Belagavi NewsBelgaum NewsKannada NewsKarnataka News

ಪಾಲಿಕೆ ವಾರ್ಡ್ ಸಮಿತಿ ರಚನೆ ಪೂರ್ವಭಾವಿ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ನಗರದ ನಿವೇಶನ ಮಾಲೀಕರ ಸಂಘ ಹಾಗೂ ಜನಾಗ್ರಹ ಎನ್‍ಜಿಒ ವತಿಯಿಂದ ಮಹಾನಗರ ಪಾಲಿಕೆ ವಾರ್ಡ್ ಸಮೀತಿ ರಚನೆ ಮತ್ತು ಜನಜಾಗೃತಿ ಕಾರ್ಯಕ್ರಮ ನಡೆಯಿತು.

ಪಾಲಿಕೆ ವತಿಯಿಂದ ಪ್ರತಿ ವಾರ್ಡ್ ನಲ್ಲಿ ವಾರ್ಡ್ ಸಮಿತಿ ರಚಿಸಬೇಕೆನ್ನುವ ಉದ್ದೇಶದಿಂದ ಈ ಸಂಬಂಧ ಚರ್ಚಿಸಲು ಪೂರ್ವಬಾವಿ ಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚರ್ಚಿಸಲು ಚನ್ನಮ್ಮ ನಗರ ರೆಸಿಡೆನ್ಸ್ ಅಸೋಸಿಯೇಶನ್ ಸಭೆ ಕರೆಯಲಾಗಿತ್ತು.

ನಿವೇಶನ ಮಾಲೀಕರ ಸಂಘದ ಪದಾಧಿಕಾರಿಗಳಾದ ಗೌರಿ ಗಜಬರ್, ಪ್ರಮೋದ ಬುದ್ದಾಜಿ ಗುಂಜಿಕರ್, ಎನ್.ಎಂ. ಶಾಂತಾರಾಮ, ಸಂಘದ ಸದಸ್ಯರು, 54ನೇ ವಾರ್ಡಿನ ನಿವಾಸಿಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

Related Articles

Back to top button