ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಮತ್ತು ಉಳಿದ ವಿಷಯಗಳ ಪರೀಕ್ಷೆಗಳನ್ನು ಈಗಾಗಲೇ ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು ಎಂದು ವಿ. ಟಿ. ಯು ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಅವರು ತಿಳಿಸಿದರು.
ವಿ.ಟಿ.ಯು ಆಡಳಿತ ವಿಭಾಗದ ಸಭಾಂಗಣದಲ್ಲಿ ಸೋಮವಾರ (ಜು.೧೯) ನಡೆದ ಪತ್ರಿಕಾಗೋಷ್ಟಿಯಲ್ಲಿ ಪದವಿ ಪರೀಕ್ಷೆಗಳ ಸಿದ್ಧತೆ ಕುರಿತು ಅವರು ಮಾತನಾಡಿದರು.
ಬಿಇ/ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಚ್ ಪದವಿ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಟೆಕ್/ಎಂ.ಆರ್ಚ್ ಪರೀಕ್ಷೆಗಳು ಘೋಷಿತ ವೇಳಾಪಟ್ಟಿಯ ಪ್ರಕಾರ ಎಸ್.ಒ.ಪಿ.ಎಸ್ ಅನುಸರಿಸಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಪರೀಕ್ಷೆಯನ್ನು ನಡೆಸಲಾಗುವುದು.
ಕೊವಿಡ್-೧೯ ಹಿನ್ನಲೆಯಲ್ಲಿ ಶೈಕ್ಷಣ ಕ ವ್ಯವಸ್ಥೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಲಾಕ್ ಡೌನ್ ಕಾರಣದಿಂದ ಪ್ರಥಮ ವರ್ಷದ ೩ ಪರೀಕ್ಷೆಗಳು ಬಾಕಿ ಉಳಿದಿರುವ ಬಿ. ಇ, ಬಿ. ಟೆಕ್, ಬಿ. ಪ್ಲಾನ್, ಬಿ.ಆರ್ಚ್ ಪದವಿಗಳ ಪರೀಕ್ಷೆಗಳನ್ನು ಈಗಾಗಲೇ ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ ನಡೆಸಲಾಗುತ್ತದೆ.
B.E./B.Tech./B.Plan ೬ನೇ ಸೆಮಿಸ್ಟರ್ M.Arch./MBA/ M.Tech ಮೊದಲ ಸೆಮಿಸ್ಟರ್ ಮತ್ತು ನಾಲ್ಕನೇ ಸಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ ತಿಳಿಸಲಾಗಿದೆ ಮತ್ತು ಮುಕ್ತ ಆಯ್ಕೆಯ ಪ್ರಶ್ನೆ ಪತ್ರಿಕೆ ಮಾದರಿಯೊಂದಿಗೆ ಆಫ್‌ಲೈನ್ (ಪೆನ್ ಮತ್ತು ಪೇಪರ್) ಮೋಡ್‌ನಲ್ಲಿ ವೇಳಾಪಟ್ಟಿಯ ಪ್ರಕಾರ ನಡೆಸಲಾಗುತ್ತದೆ. ಪ್ರಾಜೆಕ್ಟ್ / ಸೆಮಿನಾರ್ / ಇಂಟರ್ನ್‌ಶಿಪ್ ವೈವಾ-ವೋಸ್ ಪರೀಕ್ಷೆಗಳನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುವುದು.
ಕರ್ನಾಟಕ ರಾಜ್ಯ ವ್ಯಾಕ್ಸಿನೇಷನ್ ಎರಡು ಕೋಟಿ ಡೋಸ್ ದಾಟಿದ ದೇಶದ ಆರು ರಾಜ್ಯಗಳಲ್ಲಿ ಒಂದಾಗಿದ್ದು, ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜೂನ್ ೪ನೇ “ವಾರದಿಂದ ಲಸಿಕೆಗಳನ್ನು ಪ್ರಾರಂಭಿಸಲಾಗಿತ್ತು.
ಈವರೆಗೆ ೮೮.೮೮% ರಷ್ಟು ಬೋಧಕ ಸಿಬ್ಬಂದಿಗಳು ಮತ್ತು ೭೨.೮೩% ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಲಸಿಕೆ ನೀಡಲಾಗಿದೆ. ಇದಲ್ಲದೆ ವ್ಯಾಕ್ಸಿನೇಷನ್ ಡ್ರೈವ್ ಪ್ರಗತಿಯಲ್ಲಿದೆ ಹಾಗೂ ವಿಶ್ವವಿದ್ಯಾಲಯದ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವ್ಯಾಕ್ಸಿನೇಷನ್ ಡೇಟಾವನ್ನು ಸಂಗ್ರಹಿಸುತ್ತಿದೆ ಎಂದು ಪ್ರೊ. ಕರಿಸಿದ್ದಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪದವಿ ಹಾಗೂ ಸ್ನಾತಕೋತ್ತರ ಅಂತಿಮ ಸೆಮಿಸ್ಟರ್ ಪರೀಕ್ಷೆ-
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು ಯುಜಿಸಿ ಮಾರ್ಗದರ್ಶನದಂತೆ ತನ್ನ ಬಿ ಇ/ಬಿ ಟೆಕ್/ ಬಿ ಪ್ಲಾನ್ ಗಳ 8 ನೆ ಸೆಮಿಸ್ಟರ್ ಹಾಗೂ ಆರ್ಕಿಟೆಕ್ಚರ್ ನ 10ನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಹಾಗೂ ಸ್ನಾಕ್ತೋತ್ತರ ಪದವಿಗಳ ಎಂ. ಟೆಕ್., ಎಂ. ಆರ್ಚ್., ಎಂ.ಬಿ.ಎ. ಹಾಗೂ ಎಂ.ಸಿ.ಎ ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ವಿ ತಾ ವಿ ಈಗಾಗಲೇ ತಿಳಿಸಿದ ಪರೀಕ್ಷಾ ವೇಳಾಪಟ್ಟಿಯಂತೆ ದಿನಾಂಕ 26 ಜುಲೈ 2021 ರಿಂದ ಆಫ್ ಲೈನ್ ಮೋಡ್ ನಲ್ಲಿ ನಡೆಸಲಾಗುತ್ತಿದ್ದು ಪ್ರಶ್ನೆ ಪತ್ರಿಕೆಯು ಓಪನ್ ಚಾಯ್ಸ್ ಮಾದರಿಯಾಗಿರುತ್ತದೆ.
ಕಳೆದ (Odd ) ಸೆಮಿಸ್ಟರ್ ಉಳಿದ ಪರೀಕ್ಷೆಗಳ ಬಗ್ಗೆ –
ಜೊತೆಗೆ ಕೋವಿಡ್ -19ರ ಎರಡನೇ ಅಲೆಯಿಂದ ಬಿ. ಇ./ಬಿ. ಟೆಕ್./ಬಿ. ಪ್ಲಾನ್. ಪದವಿಗಳ ಪ್ರಥಮ ಸೆಮೆಸ್ಟರ್ ವಿಷಯಗಳಲ್ಲಿ ಪರೀಕ್ಷೆ ನಡೆಯದ ಉಳಿದ ವಿಷಯಗಳಿಗೆ ಹಾಗೂ ಸ್ನಾತಕೋತ್ತರ ಎಂ ಬಿ ಎ/ಎಂ ಸಿ ಎ / ಎಂ ಟೆಕ್/ ಎಂ ಆರ್ಚ್ ಪದವಿಗಳ ವಿಷಯಗಳಿಗೆ ಕಳೆದ ಬಾರಿ ನಡೆಯದ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಸಹ ಹಿಂದೆ ತಿಳಿಸಿದ ಮಾದರಿಯಲ್ಲೇ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಪರೀಕ್ಷೆಗಳನ್ನು ಜುಲೈ 27 , 2021 ರಿಂದ ನಡೆಸಲಾಗವುದು.
ಮೇಲೆ ತಿಳಿಸಿದ ಎಲ್ಲ ಪರೀಕ್ಷೆಗಳನ್ನು ಕೋವಿಡ್ -೧೯ ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸರಕಾರ ಹೊರಡಿಸಿರುವ ಎಸ ಓ ಪಿ ಮುನ್ನೆಚ್ಚರಿಕಾ ಕ್ರಮಗಳನ್ನು ಸಂಸ್ಥೆಗಳಲ್ಲಿ ಪಾಲಿಸಿಕೊಂಡು ಪರೀಕ್ಷೆಗಳನ್ನು ನಡೆಸಲು ವಿ ಟಿ ಯು ಅಗತ್ಯ ಕ್ರಮಗಳನ್ನು ಕೈಗೊಂಡು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಮಧ್ಯ (Even) ಸೆಮಿಸ್ಟರ್ ತರಗತಿಗಳ ಫಲಿತಾಂಶ –
ಬಿ.ಈ./ಬಿ. ಟೆಕ್./ಬಿ.ಪ್ಲಾನ್. ಪದವಿಗಳ ೨, ೪ ಹಾಗೂ ೬ನೇ ಸೆಮಿಸ್ಟರ್ ಗಳ ಮತ್ತು ಸ್ನಾತಕೋತ್ತರ ಪದವಿಗಳಾದ ಎಂ ಬಿ ಎ, ಎಂ ಆರ್ಚ್ ಹಾಗೂ ಎಂ. ಟೆಕ್. ಗಳ ೨ ನೇ ಸೆಮಿಸ್ಟರ್ ಹಾಗೂ ಎಂ ಸಿ ಎ ಮತ್ತು ಪಾರ್ಟ್ ಟೈಮ್ ಎಂ ಟೆಕ್ ಗಳ ೨ ಹಾಗೂ ೪ನೆಯ ಸೆಮಿಸ್ಟರ್ ಗಳ ಫಲಿತಾಂಶವನ್ನು ಯು ಜಿ ಸಿ/ಎ ಐ ಸಿ ಟಿ ಇ/ ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಫಲಿತಾಂಶಗಳನ್ನು ನೀಡಲಾಗುವುದು.
ಬ್ಯಾಕ್ ಲಾಗ್ ವಿಷಯಗಳ ಪರೀಕ್ಷೆ ಬಗ್ಗೆ –
ಮೇಲೆ ತಿಳಿಸಿದ ವಿಷಯ ಕೇವಲ ಈಗ ಆಯಾ ಸೆಮಿಸ್ಟರ್ ಗಳಲ್ಲಿ ಓದುತ್ತಿರುವ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು ಬ್ಯಾಕ್ ಲಾಗ್ ವಿಷಯಗಳಿಗೆ ಅನ್ವಯಿಸುವುದಿಲ್ಲ ಆದ್ದರಿಂದ ಬ್ಯಾಕ್ ಲಾಗ್ ವಿಷಯಗಳಿದ್ದರೆ ಅವುಗಳನ್ನು ಆಫ್ ಲೈನ್ ಮೋಡ್ ನಲ್ಲೆ ಬರೀಬೇಕು ಆದರೆ ಪ್ರಶ್ನೆಪತ್ರಿಕೆ ಓಪನ್ ಚಾಯ್ಸ್ ಆಗಿರುತ್ತದೆ.
ಇವುಗಳನ್ನು ಇವನ್ ಸೆಮೆಸ್ಟರ ಪರೀಕ್ಷೆ ಜೊತಗೆ ನಡೆಸಲಾಗುತ್ತದೆ.
ತರಗತಿಗಳ ಬಗ್ಗೆ –
ಕಾಲೇಜು ಆರಂಭದ ಬಗ್ಗೆ ಸರ್ಕಾರದ ಆದೇಶದನ್ವಯ ಈ ನಡೆಯುತ್ತಿರುವ ಈವನ್ ಸೆಮಿಸ್ಟರ್ ತರಗತಿಗಳ ಬಗ್ಗೆ ಬಾಕಿ ಉಳಿದ ಈ ಸೆಮಿಸ್ಟರ್ ಅವಧಿಗೆ ಆನ್ಲೈನ್ ಹಾಗೂ ಆಫ್ ಲೈನ್ ಮೋಡ್ ಎರಡು ವಿಧಾನಗಳನ್ನು ಒಳಗೊಂಡಂತೆ ಪ್ರತ್ಯೇಕ ವೇಳಾ ಪಟ್ಟಿಯನ್ನು ವಿ ಟಿ ಯು ನೀಡಲಿದೆ.
ಶಿಕ್ಷಣ ಸಚಿವ ಸುರೇಶ ಕುಮಾರ ಮತ್ತು ಹಿರಿಯ ಅಧಿಕಾರಿಗಳು ಗಮನಿಸಲೇಬೇಕಾದ ಆಡಿಯೋ ಸಹಿತ ಸುದ್ದಿ ಇದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ