Belagavi NewsBelgaum NewsKannada NewsKarnataka NewsPolitics

*ಪೂರ್ಣಗೊಂಡ ಸಿದ್ಧತೆ: ಇಂದೇ ಬೆಳಗಾವಿಗೆ ಆಗಮಿಸಲಿದೆ ಇಡೀ ಸರ್ಕಾರ*

ಅಧಿವೇಶನದ ಹೆಚ್ಚ ಹೆಚ್ಚಾದರೂ ಸಿಗುತ್ತಿಲ್ಲ ಪರಿಹಾರ: ಅಧಿವೇಶನಕ್ಕೆ ತಟ್ಟಲಿದೆ ಸಾಲು ಸಾಲು ಪ್ರತಿಭಟನೆಯ ಬಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆಯಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಇಂದೇ ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ‌‌. ಸಿಎಂ ಜೊತೆಗೆ ಬಹುತೇಕ ಸರ್ಕಾರ, ಪ್ರತಿಪಕ್ಷ ಹಾಗೂ ಅಧಿಕಾರಿ ವರ್ಗವೂ ಇಂದೇ ಬೆಳಗಾವಿಗೆ ಶಿಫ್ಟ್ ಆಗಲಿದೆ.

ಅಧಿವೇಶನ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ, ಸಚಿವರನ್ನು ಸ್ವಾಗತಿಸುವ ಬ್ಯಾನರಗಳು ರಸ್ತೆಯ ಇಕ್ಕೆಲಗಳಲ್ಲಿ ರಾರಾಜೀಸುತ್ತಿದೆ.

ಖರ್ಚುವೆಚ್ಚದಲ್ಲಿ ಹೆಚ್ಚಳ

Home add -Advt

ಬೆಳಗಾವಿಯಲ್ಲಿ ಈವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆಸಲಾಗಿದ್ದು,  ಒಟ್ಟು 170 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.‌ ಈ ಸಲದ 10 ದಿನದ ಅಧಿವೇಶನಕ್ಕೆ 21 ಕೋಟಿ ರೂಪಾಯಿ ಖರ್ಚಾಗಲಿದೆ‌‌‌. ಕಳೆದ ವರ್ಷ 15 ಕೋಟಿ ರೂಪಾಯಿ ವೆಚ್ಚದಲ್ಲಿ ಅಧಿವೇಶನ ಮುಕ್ತಾಯವಾಗಿತ್ತು. ಆದರೆ ಈ ವರ್ಷ ಖರ್ಚು ವೆಚ್ಚದಲ್ಲಿ ಆರು ಕೋಟಿ ರೂಪಾಯಿ ಏರಿಕೆಯಾಗಿದೆ.‌

ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಮಾಡಲಾಗಿದೆ.‌ 6 ಸಾವಿರ ಪೊಲೀಸ್ ಸಿಬ್ಬಂದಿಗಾಗಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಸುವರ್ಣ ಸೌಧದ ಸುತ್ತಮುತ್ತು ವ್ಯಾಪಕವಾಗಿ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿದೆ. 

ಅಧಿವೇಶನದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ರು ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ.‌ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ‌. ಆದರೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಒಟ್ಟು 84 ಸಂಘಟನೆಗಳು ಸಿದ್ದಗೊಂಡಿವೆ. 

ಪ್ರಮುಖ ಪ್ರತಿಭಟನೆಗಳು

ಹೆಸರು, ಸೋಯಾಬಿನ್, ಬೆಳೆಗಳಿಗೆ ಪರಿಹಾರ ನೀಡುವಂತೆ ಬಿಜೆಪಿಯಿಂದ ಸುವರ್ಣ ಸೌಧ ಮುತ್ತಿಗೆಗೆ ನಿರ್ಧಾರಿಸಲಾಗಿದೆ.‌ ಕಬ್ಬು ಬೆಳೆಗಾರರ ವಿವಿಧ ಸಮಸ್ಯೆ ಇತ್ಯರ್ಥಕ್ಕೆ ರೈತರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರಿ ನೇಮಕಾತಿಗಾಗಿ ಧಾರವಾಡದಲ್ಲಿ ನಡೆದ ಪ್ರತಿಭಟನೆಯ ಬಿಸಿ ಅಧಿವೇಶನಕ್ಕೆ ತಟ್ಟಲಿದೆ. ಕಳೆದ ವರ್ಷ ಲಾಠಿ ಏಟು ತಿಂದ ಪಂಚಮಸಾಲಿ ಸಮಾಜದಿಂದ ಮೌನ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. 

Related Articles

Back to top button