Election NewsKannada NewsKarnataka News

*ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಚುನಾವಣೆ ಫಲಿತಾಂಶ*

ಪ್ರಗತಿವಾಹಿನಿ ಸುದ್ದಿ: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಸಾಲಿನ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಧ್ಯಾನಪೂಣಚ್ಚ, ಶ್ರೀಧರ್  ಆರ್.ಮತ್ತು ಸುಭಾಶ್ ಹೂಗಾರ್ ರವರು ಸ್ಪರ್ಧೆ ಮಾಡಿದ್ದರು.

ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ , ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು  ಸ್ಥಾನಗಳಿಗೆ ಚುನಾವಣೆ ಜರುಗಿತು.

ಬೆಳಗ್ಗೆ  9ರಿಂದ 2ಗಂಟೆ ಮತದಾನ ಅವಕಾಶ ಮತದಾರರು ಮತಗಟ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು.

1040 ಮತದಾರಿದ್ದು, 767 ಮತಗಳು ಚಲಾವಣೆಯಾಗಿವೆ. ಶ್ರೀಧರ್ ಆರ್, ಅಧ್ಯಕ್ಷರು- 404 ಮತಗಳು ಪಡೆದುಕೊಂಡಿದ್ದಾರೆ. ವಿ.ಎನ್.ಮೋಹನ್ ಕುಮಾರ್ ಉಪಾಧ್ಯಕ್ಷರು -417 ಮತಗಳು ಪಡೆದುಕೊಂಡಿದ್ದಾರೆ. ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿ- ಮತಗಳು 336, ಜಿ.ಗಣೇಶ್ ಖಜಾಂಚಿ- ಮತಗಳು 556, ಜಿ.ವೈ.ಮಂಜುನಾಥ್ ಕಾರ್ಯದರ್ಶಿ- ಮತಗಳು 288, ಧರಣೇಶ್ ಜಂಟಿ ಕಾರ್ಯದರ್ಶಿ ಮತಗಳು-195, ಮಹಿಳಾ ಸ್ಥಾನ- ಮಿನಿ ತೇಜಸ್ವಿ ಮತಗಳು-491, 6 ಕಮಿಟಿ ಸದಸ್ಯರು- ಶಿವಣ್ಣ-234, ಶರಣಬಸಪ್ಪ-258 ಯಾಸ್ನಿಫ್ ಮುಸ್ತಾಕ್-259, ಮುತ್ತಾಜ್ ಅಲೀಮ್-272, ರೋಹಿಣಿ ಅಡಿಗ-306, ಮಂಜುನಾಥ್-281 ಮತಗಳನ್ನು ಪಡೆದುಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button