Latest

*ಜೈಲಿನಲ್ಲಿಯೇ ಕೈದಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಉಡುಪಿ: ವಿಚಾರಣಾಧೀನ ಕೈದಿಯೋರ್ವ ಸಬ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯ ಶಿರೂರು ಒತ್ತಿನೆಣೆ ಹೇನ್ ಬೆರಿನ ಬಳಿ ನಡೆದಿದೆ.

ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ. 20 ಕೈದಿಗಳಿದ್ದ ಕೊಠಡಿಯಲ್ಲಿ ಆರೋಪಿ ಸದಾನಂದ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸಹ ಕೈದಿಗಳು ಆತನನ್ನು ನೇಣಿನ ಕುಣಿಕೆಯಿಂದ ಬಿಡಿಸಿದ್ದಾರೆ. ಜೈಲು ಸಿಬ್ಬಂದಿಗಳು ಸದಾನಂದ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಸದಾನಂದ್ ಕೊನೆಯುಸಿರೆಳೆದಿದ್ದಾನೆ.

ಕಾರ್ಕಳ ಮೂಲದ ಸದಾನಂದ್ ಸೇರಿಗಾರ್ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ. ಸುಟ್ಟಕಾರಿನಲ್ಲಿ ತಾನೇ ಕೊಲೆಯಾಗಿರುವುದಾಗಿ ಬಿಂಬಿಸಲು ಹೊರಟು ಜೈಲು ಪಾಲಾಗಿದ್ದ. ಈಗ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

*ಮತ್ತೊಂದು ಭೀಕರ ಅಪಘಾತ; ಇಬ್ಬರು ಮಹಿಳೆಯರು ದುರ್ಮರಣ*

https://pragati.taskdun.com/tumakurucanterauto-accidenttwo-woman-death/

Related Articles

Back to top button