
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ತನ್ನ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರೈಹಾನ್ ವಾದ್ರಾ ಬಹುಕಾಲದ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹಸೆಮಣೆ ಏರಲು ಸಜ್ಜಾಗಿದ್ದಾರೆ. ಎರಡೂ ಕುಟುಂಬಗಳು ಇಬ್ಬರ ಮದುವೆ ಒಪ್ಪಿಗೆ ನೀಡಿವೆ.
ಅವಿವಾ ಬೇಗ್ ಹಾಗೂ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ರೈಹಾನ್ ಕುಟುಂಬ ಹಾಗೂ ಅವಿವಾ ಕುಟುಂಬ ನಿಕಟ ಸಂಪರ್ಕದಲ್ಲಿದ್ದಾರೆ. ರೈಹಾನ್ ವಾದ್ರಾ ಓರ್ವ ದೃಶ್ಯ ಕಲಾವಿದ. ಹತ್ತು ವರ್ಷಗಳಿಂದ ತಮ್ಮ ಕ್ಯಾಮೆರಾ ಲೆನ್ಸ್ ಮೂಲಕ ಜಗತ್ತನ್ನು ಸೆರೆ ಹಿಡಿಯುತ್ತಿದ್ದಾರೆ. ವನ್ಯಜೀವಿಗಳು ಸೇರಿದಂತೆ ಹಲವು ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಮುಂಬೈನ ಕೊಲಾಬಾದ್ ನಲ್ಲಿರುವ ಕಲಾ ಗ್ಯಾಲರಿ ಎಪಿಆರ್ ಇ ಆರ್ಟ್ ಹೌಸ್ ನಲ್ಲಿ ಅವರ ಕಲಾವರಣ ಹಾಗೂ ಜೀವನ ಚರತ್ರೆ ಲಭ್ಯವಿದೆ. ಬಾಲ್ಯದಿಂದಲೂ ರೈಹಾನ್ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದ. ಅವಿವಾ ಕೂಡ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ.



