Latest

ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಒಂದೆಡೆ ಉಪಚುನಾವಣೆ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿರುವ ಸುದ್ದಿ ಕೇಳಿಬರುತ್ತಿರುವಾಗಲೇ ಇನ್ನೊಂದೆಡೆ ರಾಜಕೀಯ ನಾಯಕರ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಯುತ್ತಿದೆ.

ಧಾರವಾಡದಲ್ಲಿ ಉದ್ಯಮಿ ಯು.ಬಿ.ಶೆಟ್ಟಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Home add -Advt

ಯು.ಬಿ.ಶೆಟ್ಟಿ ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನವರು. ಕಾಂಗ್ರೆಸ್ ನಾಯಕರೊಬ್ಬರ ಆಪ್ತರಾಗಿರುವ ಯು.ಬಿ.ಶೆಟ್ಟಿ ಅವರ ಧಾರವಾಡದ ನಿವಾಸದ ಮೇಲೆ ಗೋವಾದ ಐವರು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ.

ಕಂದಕಕ್ಕೆ ಉರುಳಿದ ಬಸ್; 8 ಪ್ರಯಾಣಿಕರ ದುರ್ಮರಣ

Related Articles

Back to top button