-ಸುಮಾ ಸಿ ಎಸ್
ಕಳೆದ 50 ವರ್ಷಗಳಲ್ಲಿ ಮಹಿಳೆಯರಿಗಾಗಿ ಸಮಾನ ಮಾನವ ಹಕ್ಕುಗಳನ್ನು ಕಲ್ಪಿಸುವ ಬಗೆಗಿನ ವಿಶ್ವಬದ್ಧತೆ ಶೀಘ್ರ ಪ್ರಗತಿ ಸಾಧಿಸಿದೆ. ಈ ಹಿಂದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳಲ್ಲಿ ಮಹಿಳೆಯರಿಗಾಗಿ ಕಡಿಮೆ ಹಕ್ಕುಗಳನ್ನು ಅಡ ಕಗೊಳಿಸುವ ಪ್ರವೃತ್ತಿಯಿಂದ ದೂರ ಸರಿಯುತ್ತಿದೆ. ಈ ಕುರಿತು ಕೆಲವು ಉದಾಹರಣೆ ಗಳನ್ನು ನಾವು ಕಾಣಬಹುದು.
ವಿಶ್ವ ಸಂಸ್ಥೆ ಸ್ಥಾಪಿಸಿದಾಗ ಮಹಿಳೆಯರ ರಾಜಕೀಯ ಹಕ್ಕುಗಳ ಬಗೆಗೆ ಗಮನ ನೀಡಲಿಲ್ಲ. ನಂತರ ಮಾನವ ಹಕ್ಕುಗಳ ಘೋಷಣೆ ಕರಡನ್ನು ಸಿದ್ಧಪಡಿಸಿ ಅದರ ವಿಧಿ (ಆರ್ಟಿಕಲ್ -1) ಎಲ್ಲ ಪುರುಷರು ಸಹೋದರರೆಂದು ಆರಂಭಗೊಂಡಿತು.
ಸಂವಿಧಾನದ ಹಕ್ಕುಗಳಲ್ಲಿ 1986 ರಲ್ಲಿ ಅಭಿವೃದ್ಧಿ ಹಕ್ಕು ಘೋಷಣೆ ತನ್ನ ವಿಧಿ 8(1)ರಲ್ಲಿ ಹೀಗೆ ಹೇಳಿದೆ: ಅಭಿವೃದ್ಧಿ ಕ್ರಿಯೆಯಲ್ಲಿ ಮಹಿಳೆಯೂ ಕ್ರಿಯಾಶೀಲವದ ಪಾತ್ರವನ್ನು ನಿರ್ವಹಿಸಲು ಖಾತ್ರಿಪಡಿಸುವುದಕ್ಕಾಗಿ ಪರಿಣಾಮ ಕ್ರಮಗಳು ಅವಶ್ಯ.
*ಅಭಿವೃದ್ಧಿ ಹಕ್ಕನ್ನು ಜಾರಿಗೊಳಿಸಲು ಲಿಂಗ ದೃಷ್ಟಿಕೋನ ಅಳವಡಿಸಿಕೊಳ್ಳುವುದು.
*ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪುರುಷನಷ್ಟು ಮಹಿಳೆಗೆ ಸಮಾನತೆ ಕಲ್ಪಿಸುವುದು.
*ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು.
ಮಹಿಳೆಯ ರಾಜಕೀಯ ಹಕ್ಕುಗಳು
*ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡುವುದು.
*ಸಾರ್ವಜನಿಕ ಹುದ್ದೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ಹುದ್ದೆ
ಅಲಂಕರಿಸುವುದು. ಹಾಗೂ ರಾಷ್ಟ್ರೀಯ ಕಾನೂನು ಪದವಿ ಅಲಂಕಾರ ಮಾಡುವುದು. ಈ ಮೇಲ್ಕಂಡ ಒಪ್ಪಂದಕ್ಕೆ 115 ದೇಶಗಳು ಸಹಿ ಹಾಕಿವೆ.
ಮಹಿಳೆ ವಿರುದ್ಧದ ತಾರತಮ್ಯ ನಿರ್ಮೂಲನೆ
*ಮಹಿಳೆ ಯಾರ ಹಕ್ಕುಗಳ ಶಾಸನಾತ್ಮಕ ಸಂರಕ್ಷಣೆ
*ಮತದಾನದ ಹಕ್ಕು
*ಸಾರ್ವಜನಿಕ ಹುದ್ದೆ ಹೊಂದುವ ಹಕ್ಕು
*ಮಹಿಳೆಯರಿಗೆ ಅವರ ವೈವಾಹಿಕ ಸ್ಥಿತಿಗತಿ ಹೊರತಾಗಿ ರಾಷ್ಟೀಯತೆ ನೀಡುತ್ತದೆ.
ಮಹಿಳೆಯರ ವಿರುದ್ಧ ಹಿಂಸೆ ನಿರ್ಮೂಲನೆ ಘೋಷಣೆ
*ಶೋಷಣೆಗೋಲಾಗದ ಮಹಿಳೆ ಯಾರು, ಅಲ್ಪಸಂಖ್ಯಾತ ಮಹಿಳೆಯಾರು, ಸ್ಥಳೀಯ ಮಹಿಳೆ, ವಲಸಿಗ ಮಹಿಳೆ, ನಿರಾಶ್ರಿತ ಮಹಿಳೆ, ಅನಾಥ ಮಹಿಳೆ, ಸಶಾಸ್ತ್ರ ದಂಗೆಗಳಲ್ಲಿ ನೊಂದ ಮಹಿಳೆ ಪರಿಹಾರ ಕಲ್ಪಿಸಿದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಾವೇಶ ಗಳಲ್ಲೂ ಸಹಾ ಮಹಿಳೆಯರಿಗೆ ಸಂಬಂಧ ಪಟ್ಟ ಸಮಸ್ಯೆ ಗಳನ್ನು ಸಹಾ ಚರ್ಚೆಯನ್ನು ಮಾಡಲಾಗಿದೆ. ಆದರೂ ಸಹಾ ನನ್ನದೊಂದು ಅಭಿಪ್ರಾಯ ಸಮಾಜವು ಬೆಳವಣಿಗೆ ಹೊಂದುತ್ತಿದ್ದರು ಹಳ್ಳಿಯ ಪ್ರದೇಶಗಳಲ್ಲಿ ಇನ್ನೂ ಸಹಾ ಕೆಳ ಮಟ್ಟದ ಅಭಿಪ್ರಾಯವನ್ನು ಹೊಂದುತ್ತಿರುವುದು ಕಂಡು ಬರುತ್ತಿದೆ. ಗಂಡಿನ ಮುಂದೆ ನೀನು ಸರಿಸಾಟಿ ಯಲ್ಲ ಅದೇ ಮನು ವಿನ ಸಿದ್ದಂತಾ ಹಾಗೂ ಕಟ್ಟುಪಾಡುಗಳಿಗೆ ದೂಕಿ ಅವಳ ಭಾವನೆಗಳಿಗೆ ಬೆಲೆ ಇಲ್ಲದ ಪರಿಸ್ಥಿತಿ ಉಂಟು ಮಾಡಲಾಗುತ್ತಿದೆ.
ಗರ್ಭಿಣಿ ಎಂಬುದೇ ಗೊತ್ತಿಲ್ಲದೆ ವಿಮಾನದ ಶೌಚಾಲಯದಲ್ಲಿ ಹೆರಿಗೆಯಾದ ಮಹಿಳೆ
https://pragati.taskdun.com/a-woman-gave-birth-in-an-airplane-toilet-without-knowing-she-was-pregnant/
*ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ವಿಶೇಷ ಭೋಜನ ಕಾರ್ಯಕ್ರಮ*
https://pragati.taskdun.com/education-departmentnoticespecial-mealsschools/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ