Kannada NewsKarnataka NewsLatest
ಮರವೇರಿ ಕುಳಿತಿದ್ದ ವ್ಯಕ್ತಿಯ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಾನಾಪುರ ತಾಲೂಕಿನ ಹಲವು ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.
ಇಲ್ಲಿನ ಕಾಪೋಲಿ ಗ್ರಾಮದಲ್ಲಿ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ ಮರವೇರಿ ಕುಳಿತಿದ್ದ ವಿಲಾಸ ದೇಸಾಯಿ ಎಂಬ 65 ವಯಸ್ಸಿನ ವ್ಯಕ್ತಿಯನ್ನು ಖಾನಾಪುರ ಅಗ್ನಿಶಾಮಕ ದಳದ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಕಾಪಾಡಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಗ್ರಾಮಗಳು ಸಂಕಷ್ಟದಲ್ಲಿ ಸಿಲುಕಿದ್ದು ಖಾನಾಪುರ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸತತವಾಗಿ ರೆಸ್ಕ್ಯೂ ಆಪರೇಶನ್ ಗಳ ಮೂಲಕ ಜನಸಾಮಾನ್ಯರ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಿನ್ನೆ ಸಂಜೆ ವಿಲಾಸ ದೇಸಾಯಿ ಮರವೇರಿ ಕುಳಿತಿದ್ದರು.
ಖಾನಾಪುರದಲ್ಲಿ ದಿಢೀರ್ ಪ್ರವಾಹ: ಮರವೇರಿ ಕುಳಿತಿದ್ದ ವ್ಯಕ್ತಿ



