Latest

ಪಿಎಸ್ ಐ ಅಕ್ರಮ; ಎಸ್ಕೇಪ್ ಆಗಿದ್ದ ಶಾಂತಾಬಾಯಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ಶಾಂತಾಬಾಯಿಯನ್ನು ಕೊನೆಗೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಪಿಎಸ್ ಐ ಹುದ್ದೆ ನೇಮಕಾತಿಗಾಗಿ 40 ಲಕ್ಷ ಹಣ ಕೊಟ್ಟು ಬ್ಲೂಟೂಥ್ ಮೂಲಕ ಪರೀಕ್ಷೆ ಅಕ್ರಮ ನಡೆಸಿ ಆಯ್ಕೆಯಾಗಿದ್ದಳು. ಪ್ರಕರಣ ಬೆಳಕಿಗೆ ಬಂದಾಗಿನಿಂದ ನಾಪತ್ತೆಯಾಗಿದ್ದ ಶಾಂತಾಬಾಯಿ ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದಳು.

ಕಳೆದ ಮೂರು ದಿನಗಳಿಂದ ಹೈದರಾಬಾದ್ ನಲ್ಲಿ ಆರೋಪಿ ಶಾಂತಾಬಾಯಿಗಾಗಿ ಸಿಐಡಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೂ ಶಾಂತಾಬಾಯಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ನಿಜಕ್ಕೂ ರಾಯರ ಪವಾಡ; ನಿರೀಕ್ಷೆಯಿಲ್ಲದೇ ರಾಜ್ಯಸಭೆಗೆ ಟಿಕೆಟ್; ಸಂತಸ ವ್ಯಕ್ತಪಡಿಸಿದ ಜಗ್ಗೇಶ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button