Kannada NewsKarnataka News

ಸಾರ್ವಜನಿಕ ವಾಚನಾಲಯ ಪ್ರಶಸ್ತಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ನಗರದ ಗಣಪತಿ ಗಲ್ಲಿಯಲ್ಲಿರುವ ಸಾರ್ವಜನಿಕ ವಾಚನಾಲಯ ಪ್ರತಿವರ್ಷಕೊಡಮಾಡುವ ಪ್ರಶಸ್ತಿಗೆ ನಾಲ್ವರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
 ಕನ್ನಡಮ್ಮ ದಿನಪ್ರತಿಕೆಯ ಹಿರಿಯ ವರದಿಗಾರ ರಾಜಶೇಖರಯ್ಯ ಹಿರೇಮಠ, ಮರಾಠಿ ರಣಝುಂಝಾರ್ ಪತ್ರಿಕೆ ಸಂಪಾದಕ ಮನೋಹರ್ ಕಾಲಕುಂದ್ರಿಕರ್, ಸ್ವತಂತ್ರ ಪ್ರಗತಿಯ ಸಂಪಾದಕಿ ಭಬಿತಾ ಪವಾರ, ಬಿಗ್ ನ್ಯೂಸ್ ಸುದ್ದಿವಾಹಿನಿಯ ಭಾಗಶ್ರೀ ಸುಣಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
 ಇದೇ ಸೋಮವಾರ ಸಾಯಂಕಾಲ ನಡೆಯಲಿರುವ  ಸಾರ್ವಜನಿಕ ವಾಚನಾಲಯದ ನಾಥ್ `ಪೈ’ ಉಪನ್ಯಾಸ ಮಾಲೆಯ ಸಮಾರಂಭದಲ್ಲಿ ಈ ಎಲ್ಲಾ ಪತ್ರಕರ್ತರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ.
 ವಾಚನಾಲಯದ ಅಧ್ಯಕ್ಷೆ ಸುನಿತಾ ಮೋಹಿತೆ, ಉಪಾಧ್ಯಕ್ಷ ನೇತಾಜಿ ಜಾಧವ, ಪದಾಧಿಕಾರಿಗಳಾದ ರಘುನಾಥ ಭಾಂಗಡಿ, ನ್ಯಾಯವಾದಿ ಐ ಜಿ. ಮುಚ್ಚಂಡಿ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.
ಜಯವಂತ ಮಂತ್ರಿ, ಪ್ರಶಾಂತ ಬರಡೆ, ಅನಂತ ಲಾಡ್, ಡಾ. ಸರಜೂ ಕಾಟ್ಕರ್ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button