ಪ್ರಗತಿವಾಹಿನಿ ಸುದ್ದಿ: ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಾಗಿಲನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದೆ. ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.
ದೇವಾಲಯದ ರತ್ನ ಭಂಡಾರ ಕೀ ಓಪನ್ ಮಾಡುವ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಸಲಿ ಕೀ ಆಡಳಿತ ಮಂಡಳಿಗೆ ಸಿಗದ ಕಾರಣ ನಕಲಿ ಕೀ ಮೂಲಕವಾಗಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ, ಅರ್ಚಕರ ಸಮ್ಮುಖದಲ್ಲಿ ಉನ್ನತ ಮಟ್ಟದ ಸಮಿತಿ ರತ್ನ ಭಂಡಾರದ ಬಾಗಿಲು ತೆರೆದಿದೆ.
ಇಂದು ಮಧ್ಯಾಹ್ನ 1:28ರ ಸುಮಾರಿಗೆ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ. ಮ್ಯಾಜಿಸ್ಟ್ರೇಟ್, ಪೊಲೀಸರು, ದೇವಾಲಯದ ಅರ್ಚಕರು, ಆಡಳಿತ ಮಂದಳಿ ಸಮ್ಮುಖದಲ್ಲಿ ಉನ್ನತ ಮಟ್ಟದ ಸಮಿತಿ ರತ್ನ ಭಂಡಾರದ ರಹಸ್ಯ ಕೋಣೆಯ ಬಾಗಿಲು ತೆರೆದಿದೆ. ರತ್ನ ಭಂಡಾರವು ದೇವರಿಗೆಸೇರಿದ ರತ್ನಾಭರಣಗಳು, ವಜ್ರ ವೈಡೂರ್ಯಗಳು, ಇತರೆ ಬೆಲೆ ಬಾಳುವ ವಸ್ತುಗಳನ್ನು ಒಳಗೊಂಡಿದೆ. ಮೊದಲು ಹೊರ ಖಜಾನೆಯನ್ನು ತೆರೆಯಲಾಗಿದ್ದು ನಂತರ ಒಳ ಖಜಾನೆ ತೆರಯಲಾಗುತ್ತದೆ.
ಎಲ್ಲವೂ ಸ್ಟ್ಯಾಂಡರ್ಡ್ ಆಪರೇಟರೇಟಿಂಗ್ ಕಾರ್ಯವಿಧನಗಳ ಮೂಲಕವೇ ನಡೆಸಲಾಗುತ್ತಿದ್ದು, ಉನ್ನತ ಮಟ್ಟದ ಸಮಿತಿ ಸದಸ್ಯರು ಹೊರ ಬಂದ ಬಳಿಕ ವಿವರ ನೀಡಲಿದ್ದಾರೆ ಎಂದು ಪುರಿ ಎಸ್ ಪಿ ಪಿನಕ ಮಿಶ್ರಾ ತಿಳಿಸಿದ್ದಾರೆ. ಬೆಲೆ ಬಾಳುವ ವಸ್ತುಗಳು, ಆಭರಣಗಳ ಕೌಂಟಿಂಗ್ ನಡೆಯಲಿದ್ದು, ಸ್ಟ್ರಾಂಗ್ ರೂಮ್ ಗೆ ಸ್ಥಳಾಂತರಿಸಲು ವಿಶೇಷ ಪೆಟ್ಟಿಗೆಗಳನ್ನು ದೇವಾಲಯಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.
12 ನೇಶತಮಾನದಲ್ಲಿ ನಿರ್ಮಾಣಗೊಂಡಿರುವ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲನ್ನು 46 ವರ್ಷಗಳ ಹಿಂದೆ 1976ರಲ್ಲಿ ತೆರೆಯಲಾಗಿತ್ತು. ಅಂದು ಆಭರಣಗಳು, ಬೆಲೆ ಬಾಳುವ ವಸ್ತುಗಳ ಕೌಂಟಿಂಗ್ ಗೆ 76 ದಿನಗಳ ಕಾಲ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ