ಪ್ರಗತಿವಾಹಿನಿ ಸುದ್ದಿ: ಪುರಿ ಜಗನ್ನಾಥ ಮಂದಿರದ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡ ಪರಿಣಾಮ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಒಡಿಶಾದ ಪುರಿಯಲ್ಲಿ ಜಗನ್ನಾಥ ಉತ್ಸವ ನಡೆಯುತ್ತಿದ್ದು, ಈ ವೇಳೆ ಈ ಘಟನೆ ನಡೆದಿದೆ. ಚಂದನ್ ಯಾತ್ರೆ ಆಚರಣೆ ಅಂಗವಾಗಿ ನರೇಂದ್ರ ಕೊಳದಲ್ಲಿ ನಡೆದ ಟ್ರಿನಿಟಿಯ ಚಾಪಾ ಖೇಲಾ ಕಾರ್ಯಕ್ರಮದ ವೇಳೆ ಈ ಅವಘಡ ಸಂಭವಿಸಿದೆ.
ಕೆರೆಯ ದೇವಿಘಾಟ್ ಬಳಿ ಪಟಾಕಿ ಸಿಡಿಸಲು ಅವಕಾಶವಿತ್ತು. ಈ ವೇಳೆ ಸಿಡಿಸಿದ ಪಟಾಕಿ ಕಿಡಿಗಳು ಪವಿತ್ರಕೊಳದಲ್ಲಿ ಜಲಕ್ರೀಡೆ ವೀಕ್ಷಿಸುತ್ತಿದ್ದ ಭಕ್ತರ ಮೇಲೆ ಬಿದ್ದಿದೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ