Kannada NewsKarnataka NewsNational
*ನನ್ನ ಮಗನನ್ನು ಸಾಯಿಸಲು ಅನುಮತಿ ನೀಡಿ ಎಂದ ಹೆತ್ತ ತಾಯಿ*

ಪ್ರಗತಿವಾಹಿನಿ ಸುದ್ದಿ: ದಯವಿಟ್ಟು ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲಾ ಮಗನ್ನು ಸಾಯಿಸಲು ಅನುಮತಿ ನೀಡಿ ಎಂದು ತಾಯಿಯೊಬ್ಬಳು ಕಣ್ಣಿರು ಹಾಕಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ.
ತುಮಕುರು ಜಿಲ್ಲೆಯ ತುರುವೇಕೆರೆಯ ರೇಣುಕಮ್ಮ ಎಂಬಾಕೆ ಈ ಮನವಿ ಮಾಡಿದ ಮಹಿಳೆ. ರೇಣುಕಂಮ ಮಗ ಅಭಿಷೇಕ್ ಎಂಬಾತ ಗಾಂಜಾ ಮಾದಕ ಸೇವನೆಗೆ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಅವಾಂತರ ಆಗಿತ್ತು. ಗಾಂಜಾ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಪುಂಡಾಟಿಕೆ ಜೊತೆಗೆ ಹೆಣ್ಣು ಮಕ್ಕಳ ಮೇಲೆ ಕೀಟಲೆ ಮಾಡುತ್ತಿದ್ದ. ಸಿಕ್ಕವರ ಮೇಲೆ ಗಲಾಟೆ ಹೊಡೆದಾಟ ಮಾಡಿಕೊಳ್ಳುತ್ತಿದ್ದ. ಇದರಿಂದಾಗಿ ರೇಣುಕಮ್ಮ ರೋಸಿಹೋಗಿದ್ದು, ಕಣ್ಣಿರು ಹಾಕಿದ್ದಾರೆ.
ಸಣ್ಣ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಜೈಲಿಗೆ ಹಾಕಿ ಇಲ್ಲ ಮಗನನ್ನು ವಿಷ ಹಾಕಿ ನಾನೇ ಸಾಯಿಸುತ್ತೇನೆ. ಹೆಣ್ಣು ಮಕ್ಕಳನ್ನ ಕೆಣಕಿ ಒದೆ ತಿಂತಾನೆ, ಮನೆ ಮುಂದೆ ಬಂದು ಜನರು ಗಲಾಟೆ ಮಾಡ್ತಾರೆ. ಇದಕ್ಕೆ ಗಾಂಜಾ ಸೇವನೆಯಿಂದ ಮಗ ಹಾಳಾಗಿದ್ದಾನೆ ಎಂದು ರೇಣುಕಮ್ಮ ಆರೋಪ ಮಾಡಿದ್ದಾರೆ.




