LatestNationalPolitics

*BREAKING: 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಿದೆ.

ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಪ್ರತಿ ಕ್ಷೇತ್ರಗಳ ಜನರಿಗೂ ಸಾಕಷ್ಟು ನಿರೀಕ್ಷೆಗಳಿವೆ.

Home add -Advt

ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ, ದೇಶದ ಜನತೆಗೆ ಮಾಘ ಪೂರ್ಣಿಮಾ, ರವಿದಾಸ್ ಜಯಂತಿಯ ಶುಭಾಷಯ ತಿಳಿಸಿದರು. ಎಲ್ಲಾ ವರ್ಗದವರಿಗಾಗಿ ಬಜೆಟ್ ತಯಾರಿಸಲಾಗಿದೆ. ವಿಕಸಿತ ಭಾರತದ ಗುರಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕಳೆದ 12 ವರ್ಷಗಳಲ್ಲಿ, ಅನಿಶ್ಚಿತತೆಗಳ ಹೊರತಾಗಿಯೂ, ನಾವು ಸ್ಥಿರವಾದ ಆರ್ಥಿಕತೆಯನ್ನು ಕಾಯ್ದುಕೊಂಡಿದ್ದೇವೆ. ನಾವು ದೂರಗಾಮಿ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ನಾವು ಸ್ವಾವಲಂಬನೆಯನ್ನು ಪ್ರಮುಖ ಉದ್ದೇಶವಾಗಿ ಕಾಯ್ದುಕೊಂಡಿದ್ದೇವೆ ಎಂದರು.


Related Articles

Back to top button