Belagavi NewsBelgaum NewsKannada NewsKarnataka NewsNationalPolitics

*ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಸಂಸದ ರಮೇಶ ಜಿಗಜಿಣಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರಕಾರದಲ್ಲಿ ಹೆಬ್ಬಾವು ಸುತ್ತಿದ ಹಾಗೆ ಭ್ರಷ್ಟಾಚಾರದ ಸುರಿಮಳೆಯಾಗುತ್ತಿದೆ. ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರದ ತಾಂಡವ ಆಡುತ್ತಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.

Home add -Advt

ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ವೀಕ್ ಆಗಿಲ್ಲ. ಅತ್ಯಂತ ಬಲಿಷ್ಠವಾಗಿ ರಾಜ್ಯ ಹಾಗೂ ದೇಶದಲ್ಲಿ ಬೆಳೆಯುತ್ತಿದೆ. ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರದ ತಾಂಡವ ಆಡುತ್ತಿದೆ. ದಲಿತರ, ಹಿಂದೂಳಿದ ವರ್ಗದ ಹಾಗೂ ಮುಸ್ಲಿಂ ಸಮಾಜದ ಚಾಂಪಿಯನ್ ಎಂದು ಹೇಳುವ ಕಾಂಗ್ರೆಸ್ ಅದೇ ಸಮಾಜದ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಎಸ್ ಟಿಪಿ ಪರಿಶಿಷ್ಟ ಜಾತಿಯ 32 ಸಾವಿರ ಕೋಟಿ ಎಲ್ಲಿ ಹೋಯಿತು. ವಾಲ್ಮೀಕಿ ನಿಗಮದ ಬಡವರ ಹಣ 187 ಕೋಟಿ ಎಲ್ಲಿ ಹೋಯಿತು. ಲೋಕಸಭಾ ಚುನಾವಣೆಯಲ್ಲಿ ದಾರೂ ಕುಡಿಸಲು ಹೋಯಿತಾ ಆ ಹಣ ? ಅಲ್ಪಸಂಖ್ಯಾತ ನಿಗಮದ ಹಣ ಎಲ್ಲಿ ಹೋಯಿತು? ಹಿಂದೂಳಿದ ಸಮಾಜದ ಮುಖ್ಯಮಂತ್ರಿ ನಾವು ಚಾಂಪಿಯನ್ ಎಂದು ಹೇಳುವ ಸಿದ್ದರಾಮಯ್ಯ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

Related Articles

Back to top button