ಪ್ರಗತಿವಾಹಿನಿ ಸುದ್ದಿ, ದೋಹಾ: FIFA ವಿಶ್ವಕಪ್ ಪಂದ್ಯಗಳಲ್ಲಿ ಕಿಕ್‌ಆಫ್‌ಗೆ ಮೂರು ಗಂಟೆಗಳ ಮೊದಲು ಮತ್ತು ಅಂತಿಮ ವಿಸಲ್ ನಂತರ ಒಂದು ಗಂಟೆಯವರೆಗೆ ಆಲ್ಕೊಹಾಲ್ ಯುಕ್ತ ಬಿಯರ್ ಖರೀದಿಸಲು ಕತಾರ್ ಟಿಕೆಟ್ ಪಡೆದ ಅಭಿಮಾನಿಗಳಿಗೆ ಅವಕಾಶ ನೀಡಲಿದೆಯಂತೆ.
ಆದಾಗ್ಯೂ, ಪಂದ್ಯಗಳ ಸಮಯದಲ್ಲಿ ಬಿಯರ್ ಮಾರಾಟವನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಪ್ರತಿ ಕ್ರೀಡಾಂಗಣದ ಸುತ್ತಲಿನ ಟಿಕೆಟ್ ಪರಿಧಿಯೊಳಗೆ ಬಿಯರ್ ಮಾರಾಟಕ್ಕೆ ಲಭ್ಯವಿರುತ್ತದೆ. ಆದರೆ ಸ್ಟೇಡಿಯಂ ಸ್ಟ್ಯಾಂಡ್‌ಗಳು ಅಥವಾ ಕಾನ್ಕೋರ್ಸ್‌ಗಳಲ್ಲಿ ಬಿಯರ್ ಮಾರಲು ಅನುಮತಿ ಇಲ್ಲ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ಮದ್ಯದ ಕಟ್ಟುನಿಟ್ಟಿನ ನಿಷೇಧ ಹೊಂದಿರುವ ಮುಸ್ಲಿಂ ರಾಷ್ಟ್ರದಲ್ಲಿ FIFA ವಿಶ್ವಕಪ್ ಪಂದ್ಯಾವಳಿ ಆಯೋಜಿಸಿದ್ದು ಪ್ರತಿಷ್ಠಿತ ಬ್ರ್ಯಾಂಡ್ ಗಳ ಬಿಯರ್ ಪೂರೈಸುವುದು ಸಂಘಟಕರ ಪಾಲಿಗೆ ಸವಾಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ Sexy ಪದ ಬಳಕೆ ಮಾಡಲು ಅಳುಕಿದ ರಾಹುಲ್ ದ್ರಾವಿಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ